

ಕೊಳ್ಳೇಗಾಲ: ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮವನ್ನು ನೇಕಾರರ ಸಮುದಾಯ ಒಕ್ಕೂಟದಿಂದ ಶನಿವಾರ ಪಟ್ಟಣದಲ್ಲಿ ಆಚರಣೆ ಮಾಡಲಾಯಿತು.
ಪಟ್ಟಣದ ದೇವಲ ಮಹರ್ಷಿ ವೃತ್ತದಲ್ಲಿರುವ ದೇವರ ದಾಸಿಮಯ್ಯ ಪ್ರತಿಮೆಗೆ ಒಕ್ಕೂಟದ ಪದಾಧಿಕಾರಿಗಳು ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿದರು.
ಒಕ್ಕೂಟದ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ಮಾತನಾಡಿ, ನೇಕಾರರ ಸಮುದಾಯದಿಂದ ಇಂದು ರಾಜ್ಯಾದ್ಯಂತ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಗುತ್ತಿದೆ. ದೇವರ ದಾಸಿಮಯ್ಯ ಮಹಾಪುರುಷರು. ವಚನ ಸಾಹಿತ್ಯಕ್ಕೆ ಅಡಿಪಾಯ ಹಾಕಿದವರು. ವೈಚಾರಿಕತೆ ಮತ್ತು ವೈಜ್ಞಾನಿಕತೆಯೊಂದಿಗೆ ನೀತಿ, ಧರ್ಮ, ತ್ಯಾಗದ ಪ್ರಚಾರ ಮತ್ತು ಪ್ರಸಾರ ಗೊಳಿಸಿದರು. ಮನುಷ್ಯನ ಮಾನವೀಯ ಧರ್ಮವನ್ನು ಎತ್ತಿ ಹಿಡಿದು ಪರಿಶ್ರಮ ಮತ್ತು ಕಾಯಕಕ್ಕೆ ಹೆಚ್ಚು ಒತ್ತು ಕೊಟ್ಟರು. ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ನಿಷ್ಠೆತೆಯಿಂದ ಜೀವಿಸೋಣ ಎಂದರು.
ಒಕ್ಕೂಟದ ಉಪಾಧ್ಯಕ್ಷ ಜಗದೀಶ್, ಸತೀಶ್, ಚಾಮರಾಜನಗರ ಜಿಲ್ಲಾಧ್ಯಕ್ಷ ಎನ್.ಮಧುಚಂದ್ರ, ನಿಕಟಪೂರ್ವ ಅಧ್ಯಕ್ಷ ನಿರಂಜನ್ ರವಿ, ದೇವಾಂಗಪೇಟೆ ಯುವ ಮುಖಂಡ ಎನ್.ಗಿರೀಶ್ ಬಾಬು, ಪಿ.ಎಂ.ಶಿವಕುಮಾರ್, ಚಿಂತುಪರಮೇಶ್, ಲಕ್ಷ್ಮಣ್, ಸುರೇಶ್, ಮುಖಂಡರಾದ ಕೆ.ಎಸ್.ಕಿರಣ್, ನಾಗಾರ್ಜುನ್, ರವಿಕುಮಾರ್ ಮತ್ತಿತರಿದ್ದರು.