

ಬೀದರ್: ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ರೌಡಿ ಶೀಟರ್ಗೆ ನೋಟಿಸ್ ನೀಡಲು ಹೋದ ಮಹಿಳಾ ಪಿಎಸ್ಐ ಮೇಲೆ ಪುಂಡರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಬೀದರ್ ಜಿಲ್ಲೆಯ ಕಮಲನಗರ ತಾಲೂಕಿನ ತೋರಣ ಗ್ರಾಮದಲ್ಲಿ, ರೌಡಿಶೀಟರ್ಗೆ ನೊಟೀಸ್ ನೀಡಲು ತೆರಳಿದ್ದ, ಕಮಲನಗರದ ಪಿಎಸ್ಐ ನಂದಿನಿ ಸೇರಿದಂತೆ ಮೂವರು ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.
ರೌಡಿಶೀಟರ್ ಜತೆಗೆ ಆತನ ಸಹಚರರು ಸೇರಿ ಒಟ್ಟು ಆರು ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದು, ದೊಣ್ಣೆ ಮಾತ್ರವಲ್ಲದೇ ಖಾರದಪುಡಿಯನ್ನೂ ಎರಚಿ ಪೊಲೀಸರಿಗೆ ಥಳಿಸಲು ಯತ್ನಿಸಿರುವ ಆಘಾತಕಾರಿ ಘಟನೆ ನಡೆದಿದೆ.
ರೌಡಿ ಶೀಟರ್ ಪಂಡರಿ ಎಂಬುವನಿಗೆ ನೋಟಿಸ್ ನೀಡಲು ಹೋಗಿದ್ದರು. ಈ ವೇಳೆ ಇನ್ನಿತರ ಆರು ಮಂದಿ ಸೇರಿ ಖಾರದ ಪುಡಿ ಎರಚಿ ಹಲ್ಲೆಗೆ ಯತ್ನಿಸಿದ್ದಾರೆ. ಈ ಕುರಿತು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್)