ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕ ದುರಂತ ಸಾವು

Youth
Published on

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದಿಂದ ಬಿದ್ದು ಕಾರ್ಮಿಕನೊಬ್ಬ ಸಾವಿಗೀಡಾಗಿರುವ ಘಟನೆ ನಗರದ ಚಂದ್ರಲೇಔಟ್ ಬಳಿಯ ಅಜಿತ್ ಸೇಟ್ ಇಂಡಸ್ಟ್ರಿಯಲ್​ ಏರಿಯಾದಲ್ಲಿ ಬುಧವಾರ ನಡೆದಿದೆ.

ಇಂದ್ರಜಿತ್ ಕುಮಾರ್ (19) ಮೃತ ದುರ್ದೈವಿ. ಕಟ್ಟಡ ಸಾಮಾಗ್ರಿ ಮೇಲೆತ್ತಲ್ಲೂ ಸಾರ್ವೆ ಕಟ್ಟಿಕೊಂಡಿದ್ದ. ಸಾರ್ವೆ ಮೇಲಿಂದ ಬಿದ್ದು ಯುವಕ ಮೃತಪಟ್ಟಿದ್ದಾನೆ. ಇಂದ್ರಜಿತ್ ಕುಮಾರ್ ಬಿಹಾರ ಮೂಲದ ಗಾರೆ ಕೆಲಸಗಾರ.

ರಾಕೇಶ್ ಗುಪ್ತ ಎಂಬುವವರಿಗೆ ಸೇರಿದ ಕಟ್ಟಡದಲ್ಲಿ ದುರಂತ ನಡೆದಿದೆ. ಘಟನೆ ಸಂಬಂಧ ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ 304 ಎ ಅಡಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net