ಕೆವಿಜಿ ಅಮರಜ್ಯೋತಿ ವಾರ್ಷಿಕ ಕ್ರೀಡಾಕೂಟ

Sul_Sports
Published on

ಸುಳ್ಯ: ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಬುಧವಾರ ಆಯೋಜಿಸಲಾಯಿತು. ಮುಖ್ಯ ಅತಿಥಿಯಾಗಿ ಅರಂತೋಡು ಪ್ರಾ.ಕೃ.ಪ.ಸ.ಸಂಘದ ಸಂತೋಷ್ ಕುತ್ತಮೊಟ್ಟೆ ಭಾಗವಹಿಸಿ ಮಕ್ಕಳಲ್ಲಿ ಕ್ರೀಡೆಯ ಮಹತ್ವವನ್ನು ಜಾಗೃತಿಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾಲೇಜಿನ ಸಿ.ಇ.ಒ ಡಾ.ಉಜ್ವಲ್ ಯು.ಜೆ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡಾಕೂಟದಿಂದಾಗುವ ಉಪಯೋಗ ಹಾಗೂ ಮಾನಸಿಕ ಒತ್ತಡ ನಿಯಂತ್ರಣ ಕುರಿತು ಮಾಹಿತಿ ನೀಡಿದರು.

ಪ್ರಾಂಶುಪಾಲೆ ಡಾ.ಯಶೋದಾ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಮ್ಯಾನೇಜಿಂಗ್ ಟ್ರಸ್ಟಿ ಡಾ.ರೇಣುಕಾ ಪ್ರಸಾದ್ ಕೆ.ವಿ., ಟ್ರಸ್ಟಿ ಡಾ.ಜ್ಯೋತಿ ಆರ್.ಪ್ರಸಾದ್, ಮೌರ್ಯ ಆರ್.ಕುರುಂಜಿ ಶುಭ ಕೋರಿದರು.

ಸಂಸ್ಥೆಯ ಸಿಬ್ಬಂದಿ ಮಾಧವ ಬಿ.ಟಿ., ಪ್ರಸನ್ನ ಕಲ್ಲಾಜೆ, ದೈಹಿಕ ಶಿಕ್ಷಕರಾದ ಡಾ.ರಾಜೇಶ್ ಕುಮಾರ್, ಪ್ರಶಾಂತ್ ಕೆ., ಆಶಾಲತ ಹಾಗೂ ಕಾಲೇಜಿನ ಉಪಪ್ರಾಂಶುಪಾಲ ದೀಪಕ್ ವೈ.ಆರ್., ಭೋದಕ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಪ್ರತಿಜ್ಞಾ ಸ್ವಾಗತಿಸಿದರು, ಖಲಿದಾ ನ್ಯೂಹ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net