18,19ರಂದು ಕುವೆಂಪು ನಾಟಕೋತ್ಸವ

FotoJet
Published on

ಕನಕಪುರ : ರಾಷ್ಟ್ರ ಕವಿ ಕುವೆಂಪು ಅವರ ಜನ್ಮೋತ್ಸವದ ಪ್ರಯುಕ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಂಗ ಕಹಳೆ ಸಂಸ್ಥೆಯಿಂದ ಜ. 18 ಮತ್ತು 19ರಂದು ಡಾ.ಬಿ.ಆರ್.ಅಂಬೇಡ್ಕರ್ ಪುರಭವನದಲ್ಲಿ ಕುವೆಂಪು ನಾಟಕೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ರಂಗ ಕಹಳೆಯ ಸಂಚಾಲಕ ಓಹಿಲೇಶ್ ಲಕ್ಷ್ಮಣ್ ತಿಳಿಸಿದರು.

ನಗರದ ರೋಟರಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2 ದಿನ ನಾಲ್ಕು ನಾಟಕ ಪ್ರದರ್ಶನ, ಕುವೆಂಪು ಅವರ ನೃತ್ಯ ನಮನ ಹಾಗೂ ಕಿರುಚಿತ್ರ ಪ್ರದರ್ಶನ ಉಚಿತವಾಗಿ ಹಮ್ಮಿಕೊಳ್ಳಲಾಗಿದೆ ಎಂದರು.

ರೋಟರಿ ಮಾಜಿ ಅಧ್ಯಕ್ಷ ಭಾನುಪ್ರಕಾಶ್ ಮಾತನಾಡಿ, ಕುವೆಂಪು ಅವರ ಸವಿನೆನಪಿಗಾಗಿ 23ನೇ ನಾಟಕೋತ್ಸವ ನಡೆಯಲಿದೆ, ರಂಗಕಹಳೆ ಸಂಸ್ಥೆ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಾಟಕ ಪ್ರದರ್ಶಿಸಿ ಉತ್ತಮ ಸ್ಥಾನದಲ್ಲಿ ನಿಲ್ಲುವಂತಾಗಿದೆ, ಕರ್ನಾಟಕ ಸೇರಿ 13 ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನಗಳು ನಡೆಯಲಿದೆ. ನಗರದ ರೋಟರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ 18ರಂದು ಸಂಜೆ 6 ಗಂಟೆಗೆ ಬೊಮ್ಮನ ಹಳ್ಳಿಯ ಕಿಂದರಜೋಗಿ ನಾಟಕ, ನಂತರ 7.30ಕ್ಕೆ ಮೋಡಣ್ಣ ತಮ್ಮ, 19ರಂದು ಸಂಜೆ 6 ಗಂಟೆಗೆ ಕುವೆಂಪು ಗೀತೆಗಳಿಗೆ ನೃತ್ಯ ನಮನ, 6.30ಕ್ಕೆ ಬಾಲಕ ಕುವೆಂಪು ಕಿರುಚಿತ್ರ, 6.50ಕ್ಕೆ ಶೂದ್ರ ತಪಸ್ವಿ ನಾಟಕ, 7.50ಕ್ಕೆ ಯಮನ ಸೋಲು ನಾಟಕ ಪ್ರದರ್ಶನ ಇರುತ್ತದೆ ಎಂದರು.

ಜಿಲ್ಲಾಧಿಕಾರಿ ಯಶ್ವಂತ್.ವಿ.ಗುರುಕಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಆರ್.ಇ.ಎಸ್ ಸಂಸ್ಥೆ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಬಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಎಂ.ಡಿ.ವಿಜಯದೇವ್ ಸೇರಿ ಹಲವರು ಭಾಗವಹಿಸಲಿದ್ದಾರೆ ಎಂದರು.

ರೋಟರಿ ಅಧ್ಯಕ್ಷ ಜಯಶಂಕರ್, ಮಾಜಿ ಅಧ್ಯಕ್ಷರಾದ ಚಂದ್ರಪ್ರಭ, ಪುಟ್ಟಸ್ವಾಮಿ, ಕಾಂತರಾಜ್, ಕರ್ನಾಟಕ ಸಂಘದ ಅಧ್ಯಕ್ಷ ಉಮಾಶಂಕರ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net