

ಕುಷ್ಟಗಿ: ಕನ್ನಡ ಸಾಹಿತ್ಯ ಶ್ರೀಮಂತಗೊಳ್ಳಲು ಜೈನ ಕವಿಗಳ ಪಾತ್ರವೂ ಪ್ರಮುಖವಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ನಟರಾಜ ಸೋನಾರ ಹೇಳಿದರು.
ಇದನ್ನೂ ಓದಿ: ಕವಿತಾ ಹಿರೇಮಠರಿಗೆ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರ
ಪಟ್ಟಣದ ಮರಿಶಾಂತವೀರ ಸ್ವತಂತ್ರ ಮಹಿಳಾ ಪಪೂ ಕಾಲೇಜಿನಲ್ಲಿ ಕಸಾಪ ವತಿಯಿಂದ ದಿ.ಪಾರ್ಶ್ವನಾಥ ಗೋಗಿ ದಂಪತಿ ಸ್ಮರಣಾರ್ಥ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ಪಂಪ, ರನ್ನ, ಪೊನ್ನ, ಜನ್ನ ಹೀಗೆ ಜೈನ ಕವಿಗಳು ಪ್ರಾಚೀನ ಕಾವ್ಯ ಹಾಗೂ ಗದ್ಯ ಕೃತಿಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಸಾಹಿತಿ ಸಿದ್ರಾಮಪ್ಪ ವಂದಾಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವಕರು ಮೊಬೈಲ್ ಬಳಕೆ ಕಡಿಮೆ ಮಾಡಿ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಕಸಾಪ ತಾಲೂಕು ಅಧ್ಯಕ್ಷ ವೀರೇಶ ಬಂಗಾರಶೆಟ್ಟರ್ ಮಾತನಾಡಿ, ಹಿರಿಯರ ಸ್ಮರಣೆಗೆ ದತ್ತಿ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ದತ್ತಿ ದಾನಿ ಶಾಂತರಾಜ ಗೋಗಿ, ಕಸಾಪ ಕಾರ್ಯದರ್ಶಿ ಮಹೇಶ ಹಡಪದ್, ಪ್ರಾಚಾರ್ಯ ಕೆ.ಎಂ. ಹಿರೇಮಠ, ಪ್ರೌಢಶಾಲೆ ವಿಭಾಗದ ಮುಖ್ಯ ಶಿಕ್ಷಕ ಕೆ.ಬಿ.ಸ್ಥಾವರಮಠ, ಪ್ರಮುಖರಾದ ಕುಮಾರ ಬಡಿಗೇರ, ನಾಗರಾಜ ಬಡಿಗೇರ, ರಾಜು ಲಮಾಣಿ, ಶಿವಲೀಲಾ ಹಿರೇಮಠ ಇತರರು ಇದ್ದರು.