

ಸಿಂಧನೂರು: ತಾಲೂಕಿನ ಕುರುಕುಂದ ಗ್ರಾಮಕ್ಕೆ ಸರ್ಕಾರಿ ಪ್ರೌಢಶಾಲೆ ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮದ ಗೆಳೆಯರ ಬಳಗ, ಗ್ರಾಮೀಣ ಸೇವಾ ಚಾರಿಟಬಲ್ ಟ್ರಸ್ಟ್‌ನಿಂದ ಶಾಸಕ ಆರ್.ಬಸನಗೌಡ ತುರ್ವಿಹಾಳಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ಇದನ್ನೂ ಓದಿ: ಉಡುಪಿಗೆ ಮಂಜೂರು ಮಾಡಿ ಐಟಿ-ಬಿಟಿ ಪಾರ್ಕ್…
ಹೊಸದಾಗಿ ಪ್ರೌಢ ಶಾಲೆ ಮಂಜೂರಾತಿಗಾಗಿ 2025-26ನೇ ಸಾಲಿನಲ್ಲಿ ಶಿಕ್ಷಣ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲು ಅನುಮತಿ ನೀಡಿದ್ದು, ಶಾಲೆಯ ಮುಖ್ಯಶಿಕ್ಷಕ ಕಳೆದ ಮೂರು ವರ್ಷಗಳಿಂದ ಪ್ರಸ್ತಾವನೆ ಸಲ್ಲಿಸುತ್ತಲೇ ಬಂದಿದ್ದಾರೆ.
ಗ್ರಾಮದಿಂದ ಪ್ರೌಢ ಶಾಲೆಯ ಅಂತರ ಕಡಿಮೆ ಇರುವ ಕಾರಣ ತಿರಸ್ಕೃತಗೊಂಡಿದ್ದು, ಈಗಿರುವ ಸರ್ಕಾರಿ ಪ್ರೌಢ ಶಾಲೆಗೆ ತೆರಳಲು ವಿದ್ಯಾರ್ಥಿಗಳು ಬಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಮೂರು ಕಿಮೀ ನಿತ್ಯ ನಡೆದು ಹೋಗಬೇಕಿದೆ. ಈ ವರ್ಷ ಅಂತರದ ಸಡಿಲಿಕೆಯನ್ನು ಸರಳೀಕರಿಸಿ ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹೊಸದಾಗಿ ಪ್ರೌಢ ಶಾಲೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಟ್ರಸ್ಟ್ ಕಾರ್ಯದರ್ಶಿ ಹನುಮಂತಪ್ಪ ಈಳಿಗೇರಾ, ಖಜಾಂಚಿ ಯಂಕಪ್ಪ, ಪ್ರಮುಖರಾದ ಫಕೀರಗೌಡ, ಯಮನೂಪ್ಪ ವಿರುಪಾಪುರ, ಬಸವರಾಜ ಡಂಕನಕಲ್, ಪ್ರಶಾಂತ ಸ್ವಾಮೀಜಿ, ಯಮನೂರು ನಾಯಕ, ಗುಡದಪ್ಪ ಶೇಷಗಿರಿ, ಗುಡದಪ್ಪ, ಅಂಬಣ್ಣ ಕಾನಿಹಾಳ, ಪಂಪಣ್ಣ ಹಲಗಿ ಇತರರಿದ್ದರು.