

ಕೈಲಾಂಚ: ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಹುಲಿಕೆರೆ ಗುನ್ನೂರು ಮತ್ತು ಕೈಲಾಂಚ ಗ್ರಾಪಂ ವ್ಯಾಪ್ತಿಯ ಗೆಳೆಯರ ಬಳಗದಿಂದ ಮೇ 13ರ ಸಂಜೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ನಾಟಕ ಏರ್ಪಡಿಸಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಕೆ.ಜಿ.ಹೊಸಹಳ್ಳಿ ದೇವರಾಜು ತಿಳಿಸಿದರು.
ಕೈಲಾಂಚ ಹೋಬಳಿ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಬೆಟ್ಟದ ರೇಣುಕಾಂಭ ಅಮ್ಮನವರ ದೇಗುಲ ಬಳಿ ಭಾನುವಾರ ಗ್ರಾಪಂ ವ್ಯಾಪ್ತಿಯ ಮುಖಂಡರ ಜತೆ ನಾಟಕದ ಪ್ರಚಾರ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿದರು.
ಜಾತ್ರಾ ಮಹೋತ್ಸವದ ಪ್ರಯುಕ್ತ ಪ್ರತಿ ವರ್ಷ ನಾಟಕಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇಂದಿನಿಂದ (ಮೇ 12) ಮೇ 4ರವರೆಗೆ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ 13ರ ಸಂಜೆ 8ಕ್ಕೆ ರೇವಣಸಿದ್ದೇಶ್ವರ ಬೆಟ್ಟದಲ್ಲಿ ಕುರುಕ್ಷೇತ್ರ ನಾಟಕ ಪ್ರರ್ಶಿಸಲಾಗುವುದು ಎಂದು ತಿಳಿಸಿದರು.
ಗ್ರಾಪಂ ಸದಸ್ಯ ನಿಂಗರಾಜು ಮಾತನಾಡಿ, ರೇವಣಸಿದ್ದೇಶ್ವರ ಬೆಟ್ಟಕ್ಕೆ ಸುಮಾರು 900 ವರ್ಷಗಳ ಇತಿಹಾಸವಿದ್ದು, ಇಂತಹ ಪವಿತ್ರ ಕ್ಷೇತ್ರದಲ್ಲಿ ನಾವಿರುವುದೇ ಧನ್ಯ. ಬೆಟ್ಟಕ್ಕೆ ಬರುವ ಭಕ್ತರಿಗೆ, ಸಾರ್ವಜನಿಕರಿಗೆ ಕಲೆಯ ರಸದೌತಣ ಸಿಗಲಿದೆ ಎಂದರು.
ಗ್ರಾಪಂ ಸದಸ್ಯ ಮಹದೇವಯ್ಯ, ನಾಗೇಶ್, ಮಾಜಿ ಸದಸ್ಯ ಗೋಪಾಲನಾಯ್ಕ, ಕೈಲಾಂಚ ಗ್ರಾಪಂ ಮಾಜಿ ಅಧ್ಯಕ್ಷ ಪಾಂಡುರಂಗ, ವಿಎಸ್‌ಎಸ್‌ಎನ್ ಸದಸ್ಯರಾದ ನಂದೀಶ್‌ಗೌಡ, ಪ್ರಶಾಂತ್, ಮುಖಂಡರಾದ ಆನಂದ್, ಶಿವಲಿಂಗಯ್ಯ, ಎ.ಸಿ. ಕೆಂಪಯ್ಯ, ಮುತ್ತರಾಜನಾಯ್ಕ, ತಮ್ಮಣ್ಣ, ದಿಲೀಪ್, ದಯಾನಂದ್, ಶರತ್, ಪುನೀತ್, ಮಂಜು, ಶಂಕರನಾಯ್ಕ, ರಾಜೇಶ್, ಸಾಗರ್‌ನಾಯ್ಕ ಇದ್ದರು.