ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ

Untitled design (23)
ಮಣ್ಣೂರು ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ಮೆರವಣಿಗೆ ಅದ್ದೂರಿಯಾಗಿ ನಡೆಯಿತು. ಪ್ರಮುಖರಾದ ತಿರುಪತಿ, ಬೆಣಕಲ್ ಪರಶಪ್ಪ, ಸಂಚಿ ಬಸವರಾಜ್, ದೇವಣ್ಣ, ಸಂಚಿ ಬಸಪ್ಪ, ಬೈರಿ ಜಡೆಪ್ಪ ಇತರರಿದ್ದರು.
Published on

ಕುರುಗೋಡು: ಮಣ್ಣೂರಿನಲ್ಲಿ ಗಂಗಾಮತ ಸಮುದಾಯದವರು ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಅಂಗವಾಗಿ ಭಾನುವಾರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಬೆಳಗ್ಗೆಯಿಂದ ಗಂಗಾಮತ ಸಮುದಾಯದ ಮಹಿಳೆಯರು ಮನೆಯಿಂದ ಸಿಹಿ ದಿನಿಸಿಗಳನ್ನು ತಯಾರಿಸಿ ಚೌಡಯ್ಯ ಭಾವಚಿತ್ರಕ್ಕೆ ನೈವೇದ್ಯ ಅರ್ಪಿಸಿದರು.

ಕುಂಭ ಕಳಸದೊಂದಿಗೆ ಟ್ರ್ಯಾಕ್ಟರ್ ವಾಹನದಲ್ಲಿ ಚೌಡಯ್ಯ ಭಾವಚಿತ್ರ ಮೆರವಣಿಗೆ ನಡೆಯಿತು. ಮಕ್ಕಳು ಅಂಬಿಗರ ಚೌಡಯ್ಯ ವೇಷ ಧರಿಸಿ ಗಮನ ಸಳೆದರು. ತಾಷಾರಾಂಡೋಲ್, ಮಂಗಳವಾದ್ಯಗಳೊಂದಿಗೆ ಗಂಗೆ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ಪ್ರಮುಖರಾದ ಬೈರಿ ಗಂಗಾಧರ್, ಅಡಿವಿ ಪಕ್ಕೀರಪ್ಪ, ಆಟೋ ದೊಡ್ಡಬಸಪ್ಪ, ರಮೇಶ್, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net