

ಯಾದಗಿರಿ : : 2024-25 ನೇ ಸಾಲಿಗಾಗಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ವತಿಯಿಂದ ಅನುಷ್ಠಾನಗೊಳ್ಳಲಿರುವ, ವಲಸೆ ಕುರಿಗಾರರಿಗೆ, ಗುರುತಿನ ಚೀಟಿ ವಿತರಿಸುವ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ಸಹಾಯಕ ನಿರ್ದೇಶಕರು ಅವರು ತಿಳಿಸಿದ್ದಾರೆ.
ಫಲಾನುಭವಿಗಳನ್ನು ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ಹಾಗೂ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯ ವಲಸೆ ಕುರಿಗಾಹಿಗಳಿಗೆ ಗುರುತಿನ ಚೀಟಿ ವಿತರಿಸುವ ಯೋಜನೆಗಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿದಾರರು ಕನಿಷ್ಠ 20 ಕುರಿಗಳನ್ನು ಹೊಂದಿರಬೇಕು. ನಿಗದಿ ಪಡಿಸಿದ ಅರ್ಜಿ ನಮೂನೆ ತಮ್ಮ ವ್ಯಾಪ್ತಿಯ ಪಶು ಆಸ್ಪತ್ರೆ ಅಥವಾ ತಾಲ್ಲೂಕ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಅಥವಾ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ಪಶು ಆಸ್ಪತ್ರೆ ಆವರಣ ರೈಲ್ವೆ ಸ್ಟೇಶನ್ ರೋಡ್ ಯಾದಗಿರಿ ಜಿಲ್ಲೆಯ ಕಛೇರಿಯಿಂದ ಪಡೆದುಕೊಂಡು, ಭರ್ತಿಮಾಡಿದ ಅರ್ಜಿನಿಗದಿತ ದಾಖಲಾತಿಗಳೊಂದಿಗೆ 2024ರ ಸೆಪ್ಟೆಂಬರ್ 23 ಒಳಗೆ ಅರ್ಜಿಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ (ನಿ) ಪಶು ಆಸ್ಪತ್ರೆ ಆವರಣ, ಸ್ಟೇಶನ್ ರೋಡ್ ಯಾದಗಿರಿ, ಅಥವಾ ದೂ.ಸಂ.08473200149, ತಾಲ್ಲೂಕ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆಯ ಕಛೇರಿ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.