ಭತ್ತದ ಹುಲ್ಲಿನ ಬಣವೆಗೆ ಬೆಂಕಿ

Published on

ಮಾನ್ವಿ: ತಾಲೂಕಿನ ಕುರ್ಡಿ ಗ್ರಾಮದ ಸಮೀಪದ ಅರೋಲಿ ರಸ್ತೆಯಲ್ಲಿ ರೈತರು ಸಂಗ್ರಹಿಸಿದ 15ಕ್ಕೂ ಹೆಚ್ಚಿನ ಭತ್ತದ ಹುಲ್ಲಿನ ಬಣವೆಗೆ ಬೆಂಕಿಯಿಂದ ಭಾರಿ ಪ್ರಮಾಣದಲ್ಲಿ ಅಗ್ನಿ ಅನಾಹುತ ಸಂಭವಿಸಿ ರೈತರ ಲಕ್ಷಾಂತರ ಮೌಲ್ಯದ ಭತ್ತದ ಮೇವಿನ ಬಣವೆಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ.

ಮಾನ್ವಿ ವಿಭಾಗದ ಆಗ್ನಿಶಾಮಕ ಅಧಿಕಾರಿ ಹಾಜೀಮಿಯಾ ಮಾತನಾಡಿ, ಕುರ್ಡಿ ಗ್ರಾಮದ ಅರೋಲಿ ರಸ್ತೆಯಲ್ಲಿನ ಮೇವಿನ ಬಣವೆಗಳಿಗೆ ಬೆಂಕಿ ಬಿದ್ದಿರುವುದಾಗಿ ಮಾಹಿತಿ ಬಂದ ಹಿನ್ನೆಲೆಯಲ್ಲಿ ಆಗ್ನಿಶಾಮಕ ಠಾಣೆಯ 2 ಅಗ್ನಿಶಾಮಕ ವಾಹನಗಳು ಹಾಗೂ ರಾಯಚೂರಿನಿಂದ ಒಂದು ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ಆರಿಸಿವೆ.

ತಪ್ಪಿದ ಹೆಚ್ಚಿನ ಅನಾಹುತ

ತಡ ರಾತ್ರಿಯವರೆಗೂ ಕಾರ್ಯಾಚರಣೆ ನಡೆಸಿ ಬೆಂಕಿಯ ಜ್ವಾಲೆಗಳು ಬೇರೆ ಪ್ರದೇಶಗಳಿಗೆ ವ್ಯಾಪಿಸದಂತೆ ತಡೆಯುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ನಿರೀಕ್ಷಕ ಮಹೇಶ ಪಾಟೀಲ್ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net