More

    ಬೆಂಗಳೂರು ಯುವಕನಿಗೆ 90 ಲಕ್ಷ ರೂ. ಉದ್ಯೋಗದ ಆಫರ್!

    ಬೆಂಗಳೂರು: ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ ಸೆಂಟರ್‌ನ ವಿದ್ಯಾರ್ಥಿಗಳು ಈ ಬಾರಿ ಪ್ಲೇಸ್‌ಮೆಂಟ್‌ನಲ್ಲಿ ದಾಖಲೆ ಪ್ಯಾಕೇಜ್ ಪಡೆದುಕೊಳ್ಳುತ್ತಿದ್ದು, ಬೆಂಗಳೂರಿನ ಎಂಜಿನಿಯರಿಂಗ್ ವಿದ್ಯಾರ್ಥಿ 90 ಲಕ್ಷ ರೂ.ನ ವಾರ್ಷಿಕ ಸಂಬಳದ ಉದ್ಯೋಗದ ಆಫರ್ ಪಡೆದುಕೊಂಡು ಎಲ್ಲರಲ್ಲಿ ಅಚ್ಚರಿ ಮೂಡಿಸಿದ್ದಾರೆ.

    ಜಾಗತಿಕ ಆರ್ಥಿಕ ಹಿಂಜರಿತದ ಕಾರಣಕ್ಕೆ ಹಲವು ದೊಡ್ಡದೊಡ್ಡ ಕಂಪನಿಗಳಲ್ಲಿ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುತ್ತಿರುವ ನಡುವೆಯೂ ಈ ಬಾರಿ ಕ್ಯಾಂಪಸ್ ಆಯ್ಕೆಯಲ್ಲಿ ರಾಜ್ಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡುತ್ತಿದ್ದಾರೆ. ಬೆಂಗಳೂರಿನ ಆರ್‌ವಿ ಎಂಜಿನಿಯರಿಂಗ್‌ ಕಾಲೇಜಿನ ರಕ್ಷಿತ್ ದತ್ತಾತ್ರೇಯ ಹೆಗಡೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.

    ಆರ್‌ವಿ ಸಿಇನಲ್ಲಿ ಇನ್ನರ್ಮೇಷನ್ ಟೆಕ್ನಾಲಜಿ ಯಲ್ಲಿ ಬ್ಯಾಚಲರ್ ಆಫ್ ಎಂಜಿನಿಯರಿಂಗ್ (ಬಿಇ) 5ನೇ ಸೆಮಿಸ್ಟರ್‌ನಲ್ಲಿ ಓದುತ್ತಿರುವ ರಕ್ಷಿತ್ ಹೆಗಡೆಗೆ ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿ ಹೊಂದಿರುವ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿ ‘UiPath’ 90 ಲಕ್ಷ ರೂ. ಪ್ಯಾಕೇಜ್‌ನ ಉದ್ಯೋಗದ ಈ ಆಫರ್ ನೀಡಿದೆ. ಕಂಪನಿಯು ರೊಬೋಟಿಕ್ ಪ್ರೊಸೆಸ್ ಆಟೋಮೇಷನ್ (RPA) ಸಾಫ್ಟ್‌ವೇರ್ ಉತ್ಪಾದಿಸುತ್ತದೆ. ರಕ್ಷಿತ್ ಅವರ ಲಿಂಕ್ಡ್ ಇನ್ ಪೊಫೈಲ್‌ನ ಪ್ರಕಾರ ಅವರು UiPathನಲ್ಲಿ ಅಪ್ ಕಮಿಂಗ್ ಸಾಫ್ಟ್ ವೇರ್ ಇಂಟರ್ನ್ ಆಗಿದ್ದಾರೆ.

    ಸಾಫ್ಟ್‌ವೇರ್ ಅಭಿವೃದ್ಧಿ

    ಕಾಲೇಜು ದಿನಗಳಲ್ಲೇ ರಕ್ಷಿತ್, ‘ಸ್ಟಡಿಬೇರ್’ ಎಂಬ ಸಾಫ್ಟ್‌ವೇರ್ ಆಪ್ಲಿಕೇಶನ್‌ ಅಭಿವೃದ್ಧಿಪಡಿಸಿದ್ದು ಇದರ ಕೋ- ಫೌಂಡರ್ ಕೂಡ ಹೌದು. ಇದು ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಪಾದಕತೆ ವೇದಿಕೆಯಾಗಿದ್ದು, ಎಂಜಿನಿಯರ್‌ ಆಗಲು ಬಯಸುವವರಿಗೆ ಮಾರ್ಗದರ್ಶಿಯಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts