More

    ಎರಡು ಹಂತದಲ್ಲಿ ಸಂಪುಟ ರಚನೆ? ನಾಳೆ ಬೆಳಗ್ಗೆ ಸಿದ್ದರಾಮಯ್ಯ ಮತ್ತೆ ದೆಹಲಿಗೆ

    ಬೆಂಗಳೂರು: ಸಿಎಂ ಆಯ್ಕೆ ಬಗ್ಗೆ ಅಧಿಕೃತ ಘೋಷಣೆ ನಡೆಯುವ ಮೊದಲೇ ಸಚಿವ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ಆದರೆ ನಿಧಾನವಾದರೂ ಪರವಾಗಿಲ್ಲ ಎಂದು ಎರಡು ಹಂತದಲ್ಲಿ ಸಂಪುಟ ರಚನೆ ಮಾಡಲು ಕಾಂಗ್ರೆಸ್ ಮುಂದಾಗುವ ಸಾಧ್ಯತೆ ಇದೆ.

    ಇಂದು ಶಾಸಕಾಂಗ ಪಕ್ಷದ ಸಭೆ ಬಳಿಕ ಸಿದ್ದರಾಮಯ್ಯ ಮತ್ತೆ ದೆಹಲಿಗೆ ತೆರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಸಚಿವ ಸಂಪುಟ ರಚನೆ ಬಗ್ಗೆ ನಾಳೆ ದೆಹಲಿಯಲ್ಲಿ ಪಟ್ಟಿ ಫೈನಲ್ ಆಗಬಹುದಾಗಿದೆ.

    ಬಲ್ಲ ಮೂಲಗಳ ಪ್ರಕಾರ ಸಿದ್ದರಾಮಯ್ಯ ಶನಿವಾರ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದ್ದು ಅವರೊಂದಿಗೆ 20 ಜನ ಸಚಿವರು ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಆ 20 ಜನರ ಪಟ್ಟಿ ನಾಳೆ ದೆಹಲಿಯಲ್ಲಿ ಫೈನಲ್ ಆಗಲಿದೆ. ಮೊದಲ ಹಂತದಲ್ಲಿ 10 ರಿಂದ 15 ಅಥವಾ 20 ಸಚಿವರ ಪ್ರಮಾಣ ವಚನ ನಡೆಯಲಿದ್ದು ಎರಡನೇ ಹಂತದಲ್ಲಿ ಪೂರ್ಣ ಪ್ರಮಾಣದ ಸಚಿವ ಸ್ಥಾನ ಭರ್ತಿಗೆ ಚಿಂತನೆ ನಡೆಸಲಾಗಿದೆ.

    ಇನ್ನು ಸಿಎಂ ಆಯ್ಕೆ ಬೆನ್ನಲ್ಲೆ ಕ್ಯಾಬಿನೆಟ್ ವಿಸ್ತರಣೆ ಚರ್ಚೆಯೂ ಶುರುವಾಗಿದ್ದು ಯಾರಿಗೆಲ್ಲ ಸಚಿವಸ್ಥಾನ ನೀಡಬೇಕು, ಸಚಿವ ಸ್ಥಾನ ತುಂಬಲು ಜಾತಿ ಲೆಕ್ಕಾಚಾರ ಮುಂತಾದವೂ ಶುರುವಾಗಿವೆ.

    ಯಾವ ಜಾತಿಯಿಂದ ಎಷ್ಟು ಸಚಿವರಿಗೆ ಅವಕಾಶ ಈ ಕುರಿತು ದಿಗ್ವಿಜಯ ನ್ಯೂಸ್​ ಮಾಹಿತಿ ಹಂಚಿಕೊಂಡಿದೆ

    1. ಲಿಂಗಾಯತ – 7
    2. ಒಕ್ಕಲಿಗ- 6
    3. ಮುಸ್ಲಿಂ- 4
    4. ಎಸ್ಟಿ- 3
    5. ಎಸ್ಸಿ(ಬಲ)- 3
    6. ಎಸ್ಸಿ ( ಎಡ)- 2
    7. ಬ್ರಾಹ್ಮಣ-1
    8. ಈಡಿಗ- 1
    9. ರೆಡ್ಡಿ-2
    10. ಕುರುಬ -2
    11. ಕ್ರಿಶ್ಚಿಯನ್ -1

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts