

ಬ್ರಹ್ಮಾವರ: ಶ್ರೀ ವೀರಕಲ್ಲುಕುಟಿಕ ದೈವಸ್ಥಾನ ಕೂರಾಡಿ ಕುಂಟೂರು ವಾರ್ಷಿಕ ಜಾತ್ರೆ ರಮೇಶ್ ಭಟ್ ನಾಯರ್‌ಬೆಟ್ಟು ನೇತೃತ್ವದಲ್ಲಿ ಇತ್ತೀಚೆಗೆ ಜರುಗಿತು.
ನೂರಾರು ಮಹಿಳೆಯರಿಂದ ಗೆಂಡ ಸೇವೆ ನೆರವೇರಿತು. ಶ್ರೀ ಬ್ರಹ್ಮಲಿಂಗೇಶ್ವರ ಯಕ್ಷಗಾನ ಮಂಡಳಿ ಕೂರಾಡಿ ಅವರಿಂದ ನರಕಾಸುರ ವಧೆ ಮತ್ತು ವೀರ ಬರ್ಬರಿಕ ಯಕ್ಷಗಾನ ಪ್ರದರ್ಶನಗೊಂಡಿತು. ದೈವಸ್ಥಾನ ಆಡಳಿತ ಮಂಡಳಿಯ ಪ್ರವೀಣ್ ಹೆಗ್ಡೆ, ಶಂಭು ಹೆಗ್ಡೆ, ಪ್ರಸಾದ್ ಹೆಗ್ಡೆ, ರಾಜೇಂದ್ರ ಹೆಗ್ಡೆ, ಹರ್ಷ ಹೆಗ್ಡೆ ನೇತೃತ್ವ ವಹಿಸಿದ್ದರು.