ಹಿರಿಯರ ಮಾರ್ಗದರ್ಶನದಲ್ಲಿ ಯುವಕರ ಪರಿಶ್ರಮ

hastantara
Published on

ಕುಂದಾಪುರ: ಯುವಕರ ಶ್ರಮದ ಹಿಂದೆ ನಿರಂತರ ಪರಿಶ್ರಮವಿದೆ. ಗಟ್ಟಿ ನಿರ್ಧಾರದಿಂದ ಒಳ್ಳೆಯ ಮನೆ ಕಟ್ಟಿಕೊಟ್ಟಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಊರ ಯುವಕರೆಲ್ಲ ಸಂಘಟಿತರಾದರೆ ಒಳ್ಳೆಯ ಕಾರ‌್ಯ ಆಗಲು ಸಾಧ್ಯ. ಎಷ್ಟೇ ದಾನ ಮಾಡಿದರೂ ಸಂಕಷ್ಟದಲ್ಲಿರುವವರಿಗೆ ಮಾಡಿಕೊಡುವ ಕೆಲಸದಲ್ಲಿ ಸಿಗುವ ಪುಣ್ಯ ದೊಡ್ಡದು ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.

ಗಾಳಿ ಮಳೆಗೆ ಗುಡಿಸಲಲ್ಲಿಯೇ ಜೀವನ ಸಾಗಿಸುತ್ತಿದ್ದ ಕೆರಾಡಿ ಗ್ರಾಮದ ಮರ್ಲಜ್ಜ ಎಂಬುವರಿಗೆ ಕೆರಾಡಿ ದುರ್ಗಾ ಕ್ರಿಕೆಟರ್ಸ್‌ ಬಳಗದವರು ದಾನಿಗಳ ನೆರವಿನೊಂದಿಗೆ ಮನೆ ನಿರ್ಮಿಸಿದ್ದು, ಭಾನುವಾರ ಮನೆ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ವರಸಿದ್ಧಿ ವಿನಾಯಕ ಪದವಿಪೂರ್ವ ಕಾಲೇಜಿನ ಸಂಸ್ಥಾಪಕ ಚಂದ್ರಶೇಖರ ಶೆಟ್ಟಿ ಕೆರಾಡಿ, ಜಿಲ್ಲಾ ಕೆಡಿಪಿ ಸದಸ್ಯ ಪ್ರಸನ್ನ ಕುಮಾರ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ನಾಗಪ್ಪ ಕೊಠಾರಿ, ಕೆರಾಡಿ ಗ್ರಾಪಂ ಅಧ್ಯಕ್ಷ ಸುದರ್ಶನ್ ಶೆಟ್ಟಿ, ಸದಸ್ಯರಾದ ರಾಘವೇಂದ್ರ ಕೊಠಾರಿ, ಬಾಲಕೃಷ್ಣ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net