ಕುಂದಾಪುರದಲ್ಲಿ ಮಕ್ಕಳ ಬೇಸಿಗೆ ಶಿಬಿರ ‘ಕುಣಿಯೋಣು ಬಾ’ ಸಮಾರೋಪ

summer camp-1
ಮಕ್ಕಳ ಬೇಸಿಗೆ ಶಿಬಿರ ‘ಕುಣಿಯೋಣು ಬಾ’ ಸಮಾರೋಪದಲ್ಲಿ ಉದ್ಯಮಿ ಮಹೇಶ್ ಹೆಗ್ಡೆ ಮಾತನಾಡಿದರು
Published on

ವಿಜಯವಾಣಿ ಸುದ್ದಿಜಾಲ ಗಂಗೊಳ್ಳಿ

ಮಕ್ಕಳ ಬೇಸಿಗೆ ಶಿಬಿರದಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸುವುದರಿಂದ ಯೂಟ್ಯೂಬ್, ವಾಟ್ಸಾೃಪ್‌ಗಳ ಲೋಕದಿಂದ ಹೊರಬರಲು ಸಾಧ್ಯ. ಅಂತಹ ಕೆಲಸ ಮಾಡುತ್ತಿರುವ ಅಕ್ಷರ ಸಂಸ್ಥೆ ಸಾಧನೆ ಮೆಚ್ಚುವಂಥದ್ದು ಎಂದು ಸಹಕಾರಿ ಧುರೀಣ, ಉದ್ಯಮಿ ಮಹೇಶ್ ಹೆಗ್ಡೆ ಹೇಳಿದರು.

ಕುಂದಾಪುರದಲ್ಲಿ ಎಂಟು ದಿನ ನಡೆದ ಮಕ್ಕಳ ಬೇಸಿಗೆ ಶಿಬಿರ ‘ಕುಣಿಯೋಣು ಬಾ’ ಸಮಾರೋಪದಲ್ಲಿ ಮಾತನಾಡಿದರು. ಅಕ್ಷರ ಸಂಸ್ಥೆಯ ಸುರೇಶ್ ಕಲ್ಲಾಗರ ಅಧ್ಯಕ್ಷತೆ ವಹಿಸಿದ್ದರು. ಬೇಸಿಗೆ ಶಿಬಿರದ ನಿರ್ದೇಶಕ, ಸಮುದಾಯ ಸಾಂಸ್ಕೃತಿಕ ಸಂಘಟನೆ ಕಾರ್ಯದರ್ಶಿ ವಾಸುದೇವ ಗಂಗೇರ ಶಿಬಿರದ ಬಗ್ಗೆ ಮಾತನಾಡಿದರು. ಸಮುದಾಯ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಡಾ.ಸದಾನಂದ ಬೈಂದೂರು, ಶಿಬಿರದ ಸಹ ನಿರ್ದೇಶಕ ಚಿನ್ನ ವಿ.ಗಂಗೇರ ಶುಭಾಶಂಸನೆಗೈದರು. ಶೇಖರ ದೋಣಿಮನೆ, ಸಂತೋಷ ಡಿ. ಉಪಸ್ಥಿತರಿದ್ದರು.

ನಾಟಕ ಪ್ರದರ್ಶನ

ವಾಸುದೇವ ಗಂಗೇರ ನಿರ್ದೇಶನದಲ್ಲಿ 60 ಮಕ್ಕಳಿಂದ ‘ಕಿರು ಗೆಜ್ಜೆ ಘಲ್ ಘಲ್’ ಮಕ್ಕಳ ನಾಟಕ ಪ್ರದರ್ಶನಗೊಂಡಿತು. ಬೆಳಕಿನ ವಿನ್ಯಾಸದಲ್ಲಿ ಡಾ.ಸದಾನಂದ ಬೈಂದೂರು, ಸಹ ನಿರ್ದೇಶನದಲ್ಲಿ ಚಿನ್ನ ವಿ.ಗಂಗೇರ, ರಂಗ ವಿನ್ಯಾಸದಲ್ಲಿ ಬಾಲಕೃಷ್ಣ ಕೆ.ಎಂ., ಸಂಗೀತದಲ್ಲಿ ರವಿ ವಿ.ಎಂ., ವಿಕ್ರಂ ಕೆ.ಎಸ್., ಲಂಕೇಶ್ ಗಂಗೇರ, ದಕ್ಷ, ರೋಹಿತ್, ಶ್ರೇಯಸ್, ಉತ್ಕಲ ಕೆ., ಸಾವಿತ್ರಿ ಸಹಕರಿಸಿದರು. ಅಕ್ಷರ ಸಂಸ್ಥೆ ಕಾರ್ಯದರ್ಶಿ ರವಿ ವಿ.ಎಂ. ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸುಪ್ರೀತ ಅತಿಥಿಗಳನ್ನು ಗೌರವಿಸಿದರು. ಸೃಷ್ಠಿ ಚಂದನ್ ಕಾರ್ಯಕ್ರಮ ನಿರೂಪಿಸಿದರು. ರಾಘವೇಂದ್ರ ಡಿ. ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net