ಒಡೆಯರ್‌ಗೆ ಕುಂಡ್ಯೋಳಂಡ ಕುಟುಂಬಸ್ಥರಿಂದ ಗೌರವ

ಒಡೆಯರ್‌ಗೆ ಕುಂಡ್ಯೋಳಂಡ ಕುಟುಂಬಸ್ಥರಿಂದ ಗೌರವ
Published on

ನಾಪೋಕ್ಲು: ಸಮೀಪದ ಹಳೆ ತಾಲೂಕು ಭಗವತಿ ದೇವಾಲಯ ಸಮುದಾಯ ಭವನ ಸಭಾಂಗಣದಲ್ಲಿ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಕುಂಡ್ಯೋಳಂಡ ಕುಟುಂಬಸ್ಥರು ಯದುವೀರ್ ಒಡೆಯರ್ ಅವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಕೊಡವ ಕೌಟುಂಬಿಕ ಉತ್ಸವ ನಡೆಯುತ್ತಿದ್ದ ಸಂದರ್ಭ ಯದುವೀರ್ ಒಡೆಯರ್ ಅವರು ಕ್ರೀಡಾಕೂಟಕ್ಕೆ ಆಗಮಿಸಿದ್ದು, ಈ ಸಂದರ್ಭ ನೀತಿ ಸಂಹಿತೆ ಇದ್ದದ್ದರಿಂದ ಗೌರವಿಸಲು ಸಾಧ್ಯವಾಗಿರಲಿಲ್ಲ ಈ ಹಿನ್ನೆಲೆ ಕುಂಡ್ಯೋಳಂಡ ಕುಟುಂಬಸ್ಥರ ಪರವಾಗಿ ಕಾರ್ನಿವಲ್ ಸಮಿತಿ ಅಧ್ಯಕ್ಷ ರಮೇಶ್ ಮುದ್ದಯ್ಯ, ಕಾರ್ಯದರ್ಶಿ ಬಿಪಿನ್, ಪೂವಯ್ಯ, ವಿಜಯ ಮುತ್ತಣ್ಣ, ಬೋಪಣ್ಣ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ಎಂಎಲ್ಸಿ ಮಂಡೆಪಂಡ ಸುಜಾ ಕುಶಾಲಪ್ಪ, ಮಾಜಿ ವಿಧಾನಸಭಾ ಸ್ಪೀಕರ್ ಬೋಪಯ್ಯ, ನಾಪಂಡ ರವಿ ಕಾಳಪ್ಪ, ಬಿದ್ದಾಟಂಡ ರಮೇಶ್ ಚಂಗಪ್ಪ, ನಾಗೇಶ್ ಕುಂದಲ್ಪಾಡಿ, ಮನು ಮುತ್ತಪ್ಪ, ರೀನಾ ಚಂಗಪ್ಪ, ಕುಲ್ಲೇಟಿರ ಗುರುವಪ್ಪ, ಕೆಟೋಳಿರ ಹರೀಶ್ ಪೂವಯ್ಯ ಶಿವಚಾಳಿಯಂಡ ಜಗದೀಶ್, ಪ್ರತೀಪ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net