ಜಾನಪದ ಪ್ರಕಾರದ ತವರೂರು ಕುಂದಾಪುರ

gan (11)
Published on

ಕುಂದಾಪುರ: ಜಾನಪದದ ತವರೂರು ಕುಂದಾಪುರ. ಗ್ರಾಮೀಣ ಭಾಗಗಳಲ್ಲಿ ಮೂಲ ಜಾನಪದ ಸಂಸ್ಕೃತಿ ಜೀವಂತವಾಗಿದೆ ಎಂದು ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಜಾನಪದ ಎಸ್.ಬಾಲಾಜಿ ಹೇಳಿದರು. ಹಾಲಾಡಿಯ ರಾಜೀವ್ ಶೆಟ್ಟಿ ಸರ್ಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ಅಂಗ ಸಂಸ್ಥೆ ಜಾನಪದ ಯುವ ಬ್ರಿಗೇಡ್ ಉಡುಪಿ ಜಿಲ್ಲಾ ಘಟಕವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದರು. ಹಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ್ ಶೆಟ್ಟಿ ಹಾಗೂ ಸಾಹಿತಿ ಮಂಜುನಾಥ್ ಕಾಮತ್ ಶುಭಾಶಂಸನೆಗೈದರು. ಜಾನಪದ ಯುವ ಬ್ರಿಗೇಡ್ ಜಿಲ್ಲಾ ಸಂಚಾಲಕರಾಗಿ ವಿನಯ್, ಸಹ ಸಂಚಾಲಕರಾಗಿ ಶರತ್ ಪೂಜಾರಿ, ಬೈಂದೂರು ಸಂಚಾಲಕರಾಗಿ ದರ್ಶನ್ ಪೂಜಾರಿ, ಸ್ವಸ್ಟಿಕ್ ಭಂಡಾರಿ, ಪ್ರಕೃತಿ ಸಾಲಿಗ್ರಾಮ, ಸೌಪರ್ಣಿಕ ಅಧಿಕಾರ ಸ್ವೀಕರಿಸಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಗುರುಪ್ರಸಾದ್ ಶೆಟ್ಟಿ, ಜನಾರ್ದನ್ ಹಾಲಾಡಿ, ಪುನೀತ್ ಪೂಜಾರಿ, ಉಪನ್ಯಾಸಕ ಪ್ರಕಾಶ್, ಚಂದ್ರಶೇಖರ, ಗಣಪತಿ ಹೆಗಡೆ, ಕುಮಾರ್, ಕಲಾವಿದ ಗುಂಡು ಪೂಜಾರಿ, ಜಾನಪದ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಅಭಿ ಶೆಟ್ಟಿ, ಕರಾವಳಿ ವಿಭಾಗ ಸಂಚಾಲಕ ಸಂದೇಶ್ ನಾಯಕ, ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಸಂಪತ್ ಕುಮಾರ್ ಉಪಸ್ಥಿತರಿದ್ದರು. ಡಾ.ಭಾರತಿ ಮರವಂತೆ ಪ್ರಸ್ತಾವನೆಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net