

ಜನ್ನಾಡಿ: ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ವಾರ್ಷಿಕೋತ್ಸವ ಪ್ರಾಂಶುಪಾಲ ರಾಮಕೃಷ್ಣ ಬಿ.ಜಿ. ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.
ಪುರಸಭಾ ಅಧ್ಯಕ್ಷ ಮೋಹನದಾಸ್ ಶೆಣೈ ಧ್ವಜಾರೋಹಣ ನೆರವೇರಿಸಿದರು. ಡಾ.ರಾಜೇಂದ್ರ ನಾಯಕ್ ವಾರ್ಷಿಕ ಸಂಚಿಕೆ ಅನಾವರಣಗೊಳಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ವರದರಾಜ ಪೈ ಹಳೇ ವಿದ್ಯಾರ್ಥಿ ಸಂಘದ ವರದಿ ವಾಚಿಸಿದರು. ದತ್ತಿ ಬಹುಮಾನ ಪಟ್ಟಿಯನ್ನು ಶಾರದಾ ಮಯ್ಯರ್, ಸಾಂಸ್ಕೃತಿಕ ವಿಭಾಗದ ಬಹುಮಾನದ ಪಟ್ಟಿಯನ್ನು ಸಹಶಿಕ್ಷಕಿ ಪದ್ಮಲತಾ, ಉಪನ್ಯಾಸಕರಾದ ಜ್ಯೋತ್ಸಾ ಪೈ, ನೇತ್ರಾ ಎಚ್.ಕೆ., ಗೀತಾ ಕುಂದರ್ ಓದಿದರು. ಸಹ ಶಿಕ್ಷಕಿ ಸವಿತಾ, ಉಪನ್ಯಾಸಕಿಯರಾದ ಪೂರ್ಣಿಮಾ ಪಿ.ನಾಯಕ್, ವನಿತಾ ನಾಯ್ಕ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಪಟ್ಟಿ ವಾಚಿಸಿದರು. ಉಪಪ್ರಾಂಶುಪಾಲ ಕಿರಣ ಹೆಗ್ಡೆ ಸ್ವಾಗತಿಸಿದರು.
ವಾರ್ಷಿಕ ಸಂಚಿಕೆ ಸಂಚಾಲಕ, ಸಹ ಶಿಕ್ಷಕ ಗಣೇಶ ಕಾಂಚನ್ ಸಹಕರಿಸಿದರು. ಸಹಶಿಕ್ಷಕಿ ವಿಜಯಾ ಪಿ. ಮತ್ತು ಉಪನ್ಯಾಸಕ ಕೇಶವ ಪಿ. ಆಟೋಟ ಸ್ಪರ್ಧೆ ಬಹುಮಾನ ಪಟ್ಟಿ ಓದಿದರು. ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಾಜೇಂದ್ರ ನಾಯಕ್ ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸ ನೀಡಿದರು. ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ಕಿಶೋರ ಕುಮಾರ, ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಅಧ್ಯಕ್ಷ ತೋಟಯ್ಯ ಪಿ.ಹಲಕರಣಿ ಮಠ ಶುಭಹಾರೈಸಿದರು. ಉಪನ್ಯಾಸಕ ಶಿವಾನಂದ ನಾಯಕ ವಂದಿಸಿದರು. ಕಾಳಾವರ ಉದಯ ಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.