

ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜಿಟಿಟಿಸಿ ಉಡುಪಿ ಮತ್ತು ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿ ನಡುವೆ ಒಪ್ಪಂದಕ್ಕೆ ಸಹಿ ಹಾಕುವ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಇಂಜಿನಿಯರಿಂಗ್ ಪಠ್ಯಕ್ರಮದಲ್ಲಿ ಇಂಟರ್ನ್‌ಶಿಪ್ ಕಡ್ಡಾಯ ವಿಭಾಗವಾಗಿರುವುದರಿಂದ ಈ ಒಪ್ಪಂದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಪಡೆದುಕೊಳ್ಳಲು ಸಹಕಾರಿ. ಮಂಜುನಾಥ್ ನಾಯಕ್, ಪ್ರಾಂಶುಪಾಲರು, ಜಿಟಿಟಿಸಿ, ಉಡುಪಿ, ಜಿಟಿಟಿಸಿ ಉಪನ್ಯಾಸಕರಾದ ದುರ್ಗಾಪ್ರಸಾದ್ ಶೆಟ್ಟಿ, ವಿಪಿನ್ ಕುಮಾರ್ ಉಪಸ್ಥಿತರಿದ್ದರು. ನಿಟ್ಟೆ ತಾಂತ್ರಿಕ ಕಾಲೇಜು ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲೂಣ್ಕರ್ ಇಂಟರ್ನ್‌ಶಿಪ್‌ಗಳ ಮೂಲಕ ಕೌಶಲ ಅಭಿವೃದ್ಧಿ ಮಹತ್ವ ಪುನರುಚ್ಚರಿಸಿದರು.
ನಿಟ್ಟೆ ಕಾಲೇಜಿನ ಐಐಸಿ ನಿರ್ದೇಶಕ ಡಾ.ಪರಮೇಶ್ವರನ್, ಉಪಪ್ರಾಂಶುಪಾಲ ಡಾ.ಐ.ರಮೇಶ್ ಮಿತ್ತಂತಾಯ, ಮೆಕಾನಿಕಲ್ ವಿಭಾಗ ಮುಖ್ಯಸ್ಥ ಡಾ.ಶ್ರೀನಿವಾಸ ಪೈ, ಇಲೆಕ್ಟ್ರಿಕಲ್ ವಿಭಾಗ ಮುಖ್ಯಸ್ಥ ಡಾ.ಸೂರ್ಯನಾರಾಯಣ, ರೊಬೊಟಿಕ್ಸ್ ವಿಭಾಗ ಮುಖ್ಯಸ್ಥ ಡಾ.ಮುರಳೀಧರ, ಇಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ.ಕೆ.ವಿ.ಎಸ್.ಎಸ್.ಸಾಯಿಯಾಮ್ ಉಪಸ್ಥಿತರಿದ್ದರು. ಕಾರ್ಯಕ್ರಮ ಸಂಯೋಜಕ ಡಾ.ಅನಂತಕೃಷ್ಣ ಸೋಮಯಾಜಿ ಮತ್ತು ಡಾ.ಅಜಿತ್ ಹೆಬ್ಬಾಳೆ ಕಾರ್ಯಕ್ರಮ ಸಂಯೋಜಿಸಿದರು.