ಕುಂದಾಪುರ ಶಾಸಕರ ಕಚೇರಿ ಕಾರ್ಯಾರಂಭ

Mla-1
ವಿದ್ಯಾಶ್ರೀ ಪ್ರಶಾಂತ ಶೇರಿಗಾರ್ ಕುಂಬ್ರಿ ಕೋಟೇಶ್ವರ ಇವರಿಗೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅವರು ಶಾಸಕರ ಅನುದಾನದ ನಿಧಿಯಿಂದ ವಾಕ್ ಶ್ರವಣ್ ಸಾಧನವನ್ನು ಹಸ್ತಾಂತರಿಸಿದರು
Published on

ಗಂಗೊಳ್ಳಿ: ಚುನಾವಣಾ ನೀತಿ ಸಂಹಿತೆ ಅಂತ್ಯಗೊಂಡ ಹಿನ್ನೆಲೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರ ಕಚೇರಿ ಶನಿವಾರ ಕಾರ್ಯಾರಂಭ ಮಾಡಿತು. ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಸಾರ್ವಜನಿಕರ ಕುಂದುಕೊರತೆಗಳ ಬಗ್ಗೆ ಹಾಗೂ ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳ ಬಗ್ಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ಪ್ರತಿ ಶನಿವಾರ ಕುಂದಾಪುರ ಶಾಸಕರ ಕಚೇರಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಗುವುದು ಎಂದರು. ವಿದ್ಯಾಶ್ರೀ ಪ್ರಶಾಂತ ಶೇರಿಗಾರ್ ಕುಂಬ್ರಿ ಕೋಟೇಶ್ವರ ಅವರಿಗೆ ಶಾಸಕರ ಅನುದಾನದ ನಿಧಿಯಿಂದ ವಾಕ್ ಶ್ರವಣ್ ಸಾಧನವನ್ನು ಹಸ್ತಾಂತರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net