ಕುಂದಾಪುರ ಸಮುದಾಯದಿಂದ ಕುಂದಾಪ್ರದ್ದೇ ಮಾತ್ಕತಿ

mathkathi
ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರದ ಅಂಬೇಡ್ಕರ್ ಭನವದಲ್ಲಿ ಕುಂದಾಪ್ರದ್ದೇ ಮಾತ್ಕತಿ ಕಾರ್ಯಕ್ರಮ ನಡೆಯಿತು
Published on

ಕುಂದಾಪುರ: ನಾವು ಕುಂದಾಪುರ ಭಾಷೆಯನ್ನು ತಾತ್ವಿಕ ಹಿನ್ನೆಲೆಯಲ್ಲಿ ಗ್ರಹಿಸಬೇಕೆ ಹೊರತು ಉತ್ಸವಗಳನ್ನ ಮಾಡುವುದರ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯವಿಲ್ಲ. ದೇವನೂರು ಮಹಾದೇವ ಅವರು ಕುಸುಮಬಾಲೆ ಕೃತಿಯಲ್ಲಿ ಬಳಸಿದ ಭಾಷೆಯಂತೆ ಕುಂದಾಪ್ರ ಕನ್ನಡ ಭಾಷೆಯಲ್ಲಿ ಮೌಲಿಕ ಕೃತಿಗಳು ರಚನೆಯಾಗಬೇಕು ಎಂದು ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರದ ಕನ್ನಡ ಪ್ರಾಧ್ಯಾಪಕ ಡಾ.ಜಯಪ್ರಕಾಶ್ ಶೆಟ್ಟಿ ಅಭಿಪ್ರಾಯಪಟ್ಟರು.

ಕುಂದಾಪುರದ ಸಮುದಾಯ ಸಾಂಸ್ಕೃತಿಕ ಸಂಘಟನೆ ಕುಂದಾಪುರದ ಅಂಬೇಡ್ಕರ್ ಭನವದಲ್ಲಿ ಭಾನುವಾರ ಕುಂದಾಪ್ರದ್ದೇ ಮಾತ್ಕತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿರಿಯರಾದ ಜಪ್ತಿಯ ಚಿಕ್ಕು, ಐತು ಮತ್ತು ಚಂದು ಅವರು ಕುಂದಾಪ್ರ ಕನ್ನಡದ ಸೊಗಡಿನ ಕೋಲು ಹುಯ್ಯುವ ಹಾಡನ್ನು ಪ್ರಸ್ತುತ ಪಡಿಸಿದರು. ನಂತರ ನಡೆದ ಸಂವಾದದಲ್ಲಿ ಡಾ.ದಿನೇಶ್ ಹೆಗ್ಡೆ, ಸಚ್ಚಿದಾನಂದ, ತಿಮ್ಮಪ್ಪ ಗುಲ್ವಾಡಿ ಮುಂತಾದವರು ಭಾಗವಹಿಸಿದರು. ಸಮುದಾಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕುಂದಾಪುರ ಸಮುದಾಯ ಅಧ್ಯಕ್ಷ ಡಾ.ಸದಾನಂದ ಬೈಂದೂರು ಸ್ವಾಗತಿಸಿದರು. ಕೇಶವ ಸಸಿಹಿತ್ಲು, ಉದಯ ಶೆಟ್ಟಿ ಗೌರವಿಸಿದರು. ಗಣೇಶ್ ಶೆಟ್ಟಿ ವಂದಿಸಿದರು. ಕಿರಿಯ ಸದಸ್ಯ ರೋಹಿಣಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net