ಕುಂದಾಪುರ: ಕುಂಭಾಶಿ ಮಕ್ಕಳ ಮನೆಯಲ್ಲಿ ಭಾನುವಾರ ಆಯೋಜಿಸಲಾದ ಕೊರಗ ಸಮುದಾಯದ ಯುವಕ- ಯುವತಿಯರ ರಕ್ತದಾನ ಶಿಬಿರಕ್ಕೆ ಶಾಸಕ ಎ.ಕಿರಣ್ ಕುಮಾರ್ ಕೊಡ್ಗಿ ಶಿಬಿರಕ್ಕೆ ಚಾಲನೆ ನೀಡಿದರು.
ಕೊರಗ ಶ್ರೇಯೋಭಿವೃದ್ಧಿ ಸಂಘ ಕುಂದಾಪುರ, ಪರಿಶಿಷ್ಟ ಗೆಳೆಯರು ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ ಹಾಗೂ ದ.ಕ. ಜಿಲ್ಲೆ ಆಶ್ರಯದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರ ಸಹಯೋಗದಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ (ಐ.ಟಿ.ಡಿ.ಪಿ) ಉಡುಪಿ, ಹುಭಾಷಿಕ ಕೊರಗರ ಯುವ ಕಲಾವೇದಿಕೆ ರಂಗನಕೆರೆ-ಬಾರ್ಕೂರು, ಮಹಾತ್ಮಾ ಜ್ಯೋತಿ ಬಾಫುಲೆ ಯುವ ವೇದಿಕೆ ಬೈಂದೂರು, ಕೊರಗ ತನಿಯ ಯುವ ಕಲಾ ವೇದಿಕೆ ಮರವಂತೆ ಸಹಕಾರದಲ್ಲಿ ಶಿಬಿರ ಆಯೋಜಿಸಲಾಯಿತು.
ತಾಲೂಕು ಕೊರಗ ಶ್ರೇಯೋಭಿವೃದ್ಧಿ ಸಂಘದ ಗಣೇಶ್ ಕುಂದಾಪುರ, ಜಿಲ್ಲಾ ಬಿಜೆಪಿ ಎಸ್‌ಟಿ ಮೋರ್ಚಾದ ಅಧ್ಯಕ್ಷ ಕುಮಾರ್ ದಾಸ್, ಮುಖಂಡರು ಉಪಸ್ಥಿತರಿದ್ದರು.