ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸ್ಥಾಪನೆ

appanna
ಅಪ್ಪಣ್ಣ
Published on

ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಬೆಳವಣಿಗೆ ಹಾಗೂ ಅಧ್ಯಯನಕ್ಕಾಗಿ ಬಸ್ರೂರು ಅಪ್ಪಣ್ಣ ಹೆಗ್ಡೆ ಅವರ ನೇತೃತ್ವದಲ್ಲಿ ಕುಂದ ಕನ್ನಡ ಭಾಷಾಭಿವೃದ್ಧಿ ವೇದಿಕೆ ಸ್ಥಾಪನೆಗೆ ನಿರ್ಧರಿಸಲಾಗಿದೆ.

ಕುಂದಾಪುರ ಬಂಟರ ಯಾನೆ ನಾಡವರ ಸಂಘದ ಗಿಳಿಯಾರು ಕುಶಲ ಹೆಗ್ಡೆ ಸಭಾಭವನದಲ್ಲಿ ನಡೆದ ಸಭೆಯಲ್ಲಿ ವೇದಿಕೆ ಸಂಚಾಲಕರಾಗಿ ಯು.ಎಸ್.ಶೆಣೈ, ಡಾ.ಉಮೇಶ್ ಪುತ್ರನ್, ಆವರ್ಸೆ ಸುಧಾಕರ ಶೆಟ್ಟಿ, ಕಿಶೋರ್ ಕುಮಾರ್ ಕಲಾಕ್ಷೇತ್ರ, ಸಾಲಗದ್ದೆ ಶಶಿಧರ ಶೆಟ್ಟಿ, ಕೃಷ್ಣಪ್ರಸಾದ ಅಡ್ಯಂತಾಯ, ಜೋನ್ ಡಿಸೋಜ, ಅಶೋಕಕುಮಾರ್ ಶೆಟ್ಟಿ ಸಂಸಾಡಿ, ವಿಶ್ವನಾಥ ಕರಬ, ನಿತ್ಯಾನಂದ ಶೆಟ್ಟಿ ಅಂಪಾರು ಪದಾಧಿಕಾರಿಗಳಾಗಿ, ಖಜಾಂಚಿಯಾಗಿ ಕೆ.ಆರ್.ನಾಯ್ಕ ಹಾಗೂ ಲೆಕ್ಕಪರಿಶೋಧಕರಾಗಿ ಎನ್.ಶಾಂತಾರಾಮ ನಾಯಕ್ ಮತ್ತು ಕಾನೂನು ಸಲಹೆಗಾರರಾಗಿ ಟಿ.ಬಿ.ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ.

ಕುಂದ ಕನ್ನಡದ ಅಪಾರ ಸಾಹಿತ್ಯಿಕ, ಸಾಂಸ್ಕೃತಿಕ, ಜಾನಪದ ಸಂಪತ್ತನ್ನು ಉಳಿಸುವ ದೃಷ್ಟಿಯಿಂದ ಹಾಗೂ ಕುಂದ ಕನ್ನಡದ ಎಲ್ಲ ಲೇಖಕರ ಕೃತಿಗಳನ್ನು ಸಂಗ್ರಹಿಸುವ, ಕಲಾವಿದರ ಮಾಹಿತಿ ಸಂಗ್ರಹಿಸುವ, ಕುಂದಾಪ್ರ ಕನ್ನಡ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ವೇದಿಕೆ ಸ್ಥಾಪಿಸಲಾಗಿದೆ ಎಂದು ಬಿ.ಅಪ್ಪಣ್ಣ ಹೆಗ್ಡೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net