

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಇಸ್ರೋ ಭಾರತದ ಬಹುದೊಡ್ಡ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಶೈಕ್ಷಣಿಕ, ಕೃಷಿ, ಸಂವಹನ, ಬಾಹ್ಯಕಾಶ, ಕ್ಷಿಪಣಿ, ರಾಕೆಟ್, ಉಪಗ್ರಹ, ಉಪಗ್ರಹ ವಾಹಕಗಳು ಮೊದಲಾದ ತಂತ್ರಜ್ಞಾನ ಮತ್ತು ರಕ್ಷಣಾ ಕ್ಷೇತ್ರದ ಯೋಜನೆಗಳ ಮೂಲಕ ರಾಷ್ಟ್ರದ ಬೆಳವಣಿಗೆಗೆಯಲ್ಲಿ ಪ್ರಮಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳು ಖಗೋಳ ತಂತ್ರಜ್ಞಾನಗಳ ಬಗ್ಗೆ ಬಾಲ್ಯದಲ್ಲಿ ತಿಳಿದುಕೊಂಡಾಗ ಉನ್ನತ ಶಿಕ್ಷಣ ಪಡೆಯಲು ಸಹಕಾರಿ ಎಂದು ಇಸ್ರೋದ ಹಿರಿಯ ನಿವೃತ್ತ ವಿಜ್ಞಾನಿ ಪ್ರೇಮಾನಂದ ಶೆಣೈ ಹೇಳಿದರು.
ಯು.ಆರ್.ರಾವ್ ಸ್ಯಾಟ್‌ಲೈಟ್ ಸೆಂಟರ್ ಬೆಂಗಳೂರು ವತಿಯಿಂದ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪಿಯು ಕಾಲೇಜು ಹೆಬ್ರಿ ವಿಜ್ಞಾನ ಸಂಘ ಆಶ್ರಯದೊಂದಿಗೆ ಬಾಹ್ಯಾಕಾಶ ವಿಷಯದ ಬಗ್ಗೆ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು.
ಇಸ್ರೋದ ವಿಜ್ಞಾನಿ ಡಾ.ರಾಧಾಕೃಷ್ಣನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಇಸ್ರೋದ ವಿಜ್ಞಾನಿಗಳಾದ ಶ್ರೀಧರ, ಶ್ರೀದೇವಿ ಭಟ್, ಸೌಭಾಗ್ಯ, ಶಶಿಕಲಾ ಎಸ್.ರಾವ್, ಮಂಜುನಾಥ್ ಓಲೆಕಾರ್, ಲಿವಿನ್ ಕುಮಾರ್, ಪ್ರತಿಭಾ ಹೆಬ್ಬಾರ್ ಪಿ., ಸತೀಶ್ ಎಂ., ಪ್ರಸಾದ್ ಬಿ.ಎಸ್., ಮುರಳಿದರ ಕೆ.ವಿ., ಟ್ರಸ್ಟಿನ ಕಾರ್ಯದರ್ಶಿ ಎಚ್.ಗುರುದಾಸ್ ಶೆಣೈ, ಟ್ರಸ್ಟ್ ಸದಸ್ಯರಾದ ಬಾಲಕೃಷ್ಣ ಮಲ್ಯ, ಉದ್ಯಮಿ ಯೋಗೀಶ್ ಭಟ್, ಕಾಲೇಜು ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ್ ಶೆಟ್ಟಿ, ಅಮೃತ ಭಾರತಿ ವಿದ್ಯಾ ಕೇಂದ್ರ ಪ್ರಾಂಶುಪಾಲ ಅರುಣ ಕುಮಾರ್ ಉಪಸ್ಥಿತರಿದ್ದರು. ಚಿತ್ರ ವಿ.ನಾಯಕ್ ಸ್ವಾಗತಿಸಿದರು. ಉಪನ್ಯಾಸಕಿ ಜ್ಯೋತಿ ನಿರೂಪಿಸಿದರು. ಉಪನ್ಯಾಸಕಿ ದಿವ್ಯಾ ವಂದಿಸಿದರು.
ಉಪನ್ಯಾಸ, ಪಿಪಿಟಿ ಶೋ, ಉಪನ್ಯಾಸ, ಮಾಡೆಲ್‌ಗಳ ಪ್ರದರ್ಶನ, ವಿಜ್ಞಾನ ಮತ್ತು ಬಾಹ್ಯಾಕಾಶ ಸಂಬಂಧಿತ ರಸ ಪ್ರಶ್ನೆ, ಪೋಸ್ಟರ್ ಡ್ರಾಯಿಂಗ್ ಸ್ಪರ್ಧೆ, ನೆನಪು ಶಕ್ತಿ ಸ್ಪರ್ಧೆ, ಇಸ್ರೋ ಉಪಕರಣಗಳ ಮಾದರಿ ಪ್ರದರ್ಶನ, ಉಪನ್ಯಾಸ ಸಂವಾದ ನಡೆಯಿತು. ಉಡುಪಿ ಜಿಲ್ಲೆಯ 30ಕ್ಕೂ ಹೆಚ್ಚು ಶಾಲೆಗಳಿಂದ 1200 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾಲೇಜು ವಿಜ್ಞಾನ ಸಂಘದ ವಿದ್ಯಾರ್ಥಿಗಳು ಮತ್ತು ಇಸ್ರೋ ವಿಜ್ಞಾನಿಗಳ ಮುಖಾ ಮುಖಿ ಸಂವಾದ ಕಾರ್ಯಕ್ರಮದಿಂದಾಗಿ ಸಂಶೋಧನಾ ಕ್ಷೇತ್ರದಲ್ಲಿ ವಿದ್ಯಾರ್ಥಿಗಳು ಇನ್ನಷ್ಟು ತೊಡಗಿಸಿಕೊಳ್ಳಲು ಪ್ರೇರಣೆ ದೊರೆಯುತ್ತದೆ.ರವಿ ರಾವ್ ಅಮೃತ ಭಾರತಿ ಟ್ರಸ್ಟ್ ಅಧ್ಯಕ್ಷ