ವಿಶೇಷ ಒಲಿಂಪಿಕ್ಸ್‌-ಎರಡು ಚಿನ್ನದ ಪದಕ ಪಡೆದ ಕುಮಟಾದ ವಿಘ್ನೇಶ

Special-olimpics-gold-medalist-Vignesh-Naik
Published on

ಕುಮಟಾ: ಪಟ್ಟಣದ ದಯಾನಿಲಯ ವಿಶೇಷ ಶಾಲೆಯ ವಿಘ್ನೇಶ ಲೊಕೇಶ್ವರ ನಾಯ್ಕ ವಿಶೇಷ ಒಲಿಂಪಿಕ್ಸ್ ವಿಶ್ವ ಬೇಸಿಗೆ ಕ್ರೀಡಾಕೂಟದಲ್ಲಿ ಮತ್ತೊಂದು ಚಿನ್ನದ ಪದಕ ಪಡೆದಿದ್ದಾರೆ.
ಜರ್ಮನಿಯ ಬರ್ಲಿನ್ ನಗರದಲ್ಲಿ ನಡೆದ ಕ್ರೀಡಾಕೂಟದ ಟೇಬಲ್ ಟೆನಿಸ್ ಸಿಂಗಲ್ಸ್ ನಲ್ಲಿ 18-24 ವಯಸ್ಸಿನ ವಿಭಾಗದಲ್ಲಿ ಚಿನ್ನದಪದಕ ಪಡೆದಿದ್ದರು.

ಈಗ ಟೇಬಲ್ ಟೆನಿಸ್ ನ ಡಬ್ಬಲ್ಸ್ ವಿಭಾಗದಲ್ಲಿ ಪ್ರತೀಕ್ ಮಂಗೇಶ ಮೋಪ್ಕರ್ ಅವರ ಜತೆ ಸೇರಿ ಇಟಲಿ ದೇಶವನ್ನು ಮಣಿಸಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಸಿಂಗಲ್ಸ್ನಲ್ಲಿ ಅವರು ಭಾರತದ ಇನ್ನೊಬ್ಬ ಸ್ಪರ್ಧಿಯ ಜತೆ ಸೆಣೆಸಿದ್ದರು.

ವಿಘ್ನೇಶ ಕಳೆದ ಆರು ವರ್ಷಗಳಿಂದ ವಿಶೇಷ ಚೇತನರ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ರಾಜಸ್ಥಾನ, ದಿಲ್ಲಿ, ಪಂಜಾಬ, ಗುಜರಾತದಲ್ಲಿ ಪ್ರಥಮ ಸ್ಥಾನ ಪಡೆದಿದ್ದರು. ಅಂಗವಿಕಲರಿಗಾಗಿ ನಡೆಯುವ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.
ಕಳೆದ ಬಾರಿ ಯುಎಇ, ಅಬುದಾಬಿಯಲ್ಲಿ ನಡೆದ ವಿಶೇಷ ಒಲಿಂಪಿಕ್ಸ್ ಸ್ಪರ್ಧೆಯಲ್ಲಿ ಎರಡು ಬಂಗಾರದ ಪದಕಗಳನ್ನು ಪಡೆದಿದ್ದರು. ವಿಘ್ನೇಶ ಅವರು ವಿಶೇಷ ಒಲಿಂಪಿಕ್ಸ್ನಲ್ಲಿ ಭಾಗವಹಿಸುವ ದಯಾನಿಲಯ ಶಾಲೆಯ ಎರಡನೇ ವಿದ್ಯಾರ್ಥಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net