ಇ-ಕೆವೈಸಿ ಮಾಡಿಸದ 42 ಸಾವಿರ ರೈತರ ಕಿಸಾನ ಸಮ್ಮಾನ ನಿಧಿಗೆ ಕುತ್ತು

pm-kisan-samman-
Published on

ಕಾರವಾರ: ಇನ್ನು ಮೂರು ದಿನಗಳಲ್ಲಿ ಇ-ಕೆವೈಸಿ ಮಾಡಿಸದೇ ಇದ್ದಲ್ಲಿ ಜಿಲ್ಲೆಯ 42 ಸಾವಿರ ರೈತರು ಪಿಎಂ ಕಿಸಾನ್ ಸಮ್ಮಾನ ನಿಧಿ ಕಂತು ಕಳೆದಕೊಳ್ಳಲಿದ್ದಾರೆ.
ಸ್ವಂತ ಭೂ ಹಿಡುವಳಿ ಹೊಂದಿದ ರೈತರಿಗೆ ವರ್ಷಕ್ಕೆ ತಲಾ 6 ಸಾವಿರ ರೂ. ನೀಡು  ಮೋದಿ ಸರ್ಕಾರದ ಯೋಜನೆ ಇದಾಗಿದೆ.  ತಲಾ 2 ಸಾವಿರದಂತೆ ಮೂರು ಕಂತುಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ.

ಇದುವರೆಗೆ ರೈತರಿಗೆ 13 ಕಂತು ಹಣ ಜಮಾ ಮಾಡಲಾಗಿದೆ. ಈ ಸೌಲಭ್ಯ ಪಡೆಯಲು ಬ್ಯಾಂಕ್ ಗೆ ಆಧಾರ ಸಂಖ್ಯೆ ಜೋಡಣೆ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ಜಿಲ್ಲೆಯಲ್ಲಿ 1.68 ಲಕ್ಷ ರೈತರು ಈ ಸೌಲಭ್ಯ ಪಡೆಯುತ್ತಿದ್ದು, ಇದುವರೆಗೆ 1.26 ಲಕ್ಷ ರೈತರು ಇ - ಕೆವೈಸಿ ಮಾಡಿಸಿಕೊಂಡಿದ್ದಾರೆ. ಇನ್ನೂ 42,228 ರೈತರು ಇ ಕೆವೈಸಿ ಮಾಡಿಸಿಕೊಳ್ಳುವುದು ಬಾಕಿ ಉಳಿದಿದೆ.

ಜುಲೈ‌ ಮೊದಲ‌ ವಾರದಲ್ಲಿ ಪಿಎಂ ಕಿಸಾನ್ 14 ನೇ ಕಂತನ್ನು ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆ ಇದ್ದು, ಇಕೆವೈಸಿ ಮಾಡಿಸದೇ ಇದ್ದವರಿಗೆ ಹಣ ಜಮಾ ಆಗದು ಎಂದು ಕೇಂದ್ರ ಕೃಷಿ ಕಲ್ಯಾಣ ಇಲಾಖೆ ತಿಳಿಸಿದೆ. ಇಲಾಖೆಯು ರೈತರ ಪಟ್ಟಿ ಕಳಿಸಿಕೊಟ್ಟಿದ್ದು, ಗ್ರಾಪಂವಾರು ರೈತರಿಗೆ ಇಕೆವೈಸಿ ಮಾಡಿಸುವ ಕಾರ್ಯ ಮಾಡಲಾಗುತ್ತಿದೆ.

ರೈತರೇ ಇಲ್ಲ..? ಆದಾಯ ತೆರಿಗೆ ಪಾವತಿ ಮಾಡುವ ಸಾವಿರಕ್ಕೂ ಅಧಿಕ ರೈತರಿಗೆ ನೀಡಿದ್ದ ಕಿಸಾನ್ ಸಮ್ಮಾನ ನಿಧಿಯನ್ನು ಈಗಾಗಲೇ ವಾಪಾಸ್ ಪಡೆಯಲಾಗಿದೆ. ಈಗ ಇ-ಕೆವೈಸಿ ಮಾಡಿಸಲು ಮುಂದಾದ   ಸಂದರ್ಭದಲ್ಲಿ ರೈತರು ಊರಿನಲ್ಲಿಲ್ಲದಿರುವುದು ಕಂಡುಬಂದಿದೆ ಎನ್ನುತ್ತಾರೆ ಅಧಿಕಾರಿಯೊಬ್ಬರು.

ಇ-ಕೆವೈಸಿ ಮಾಡಿಸುವುದು ಹೇಗೆ..?

1. ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರ, ಗ್ರಾಮ, ಒನ್ ಕೇಂದ್ರ ಸಾಮಾನ್ಯ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋ ಮೆಟ್ರಿಕ್‌ ಅಥವಾ ಮೊಬೈಲ್ ಒಟಿಪಿ ಮೂಲಕ ಇ ಕೆವೈಸಿ ಮಾಡಿಸಬಹುದು.

  • 2. ತಮ್ಮ ಹತ್ತಿರದ ಅಂಚೆ ಕಚೇರಿಗೆ ಭೇಟಿ ಮಾಡಿ ಪೋಸ್ಟಲ್ ಅಕೌಂಟ್ ಮಾಡುವ ಮೂಲಕ ಪಿಎಂ ಕಿಸಾನ ಇ ಕೆವೈಸಿ ತ್ವರಿತವಾಗಿ ಮಾಡಿಕೊಳ್ಳುಬಹುದು.
  • 3. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಪಿ.ಎಂ.ಕಿಸಾನ್ ಮೊಬೈಲ್ ಆ್ಯಾಪ್ ಅನ್ನು  ಡೌನಲೋಡ್ ಮಾಡಿಕೊಂಡು, ಅದರಲ್ಲಿ  ಸ್ವತಃ ಫಲಾನುಭವಿಗಳೇ ತಮ್ಮ ಮುಖಚಹರೆ ತೋರಿಸುವ ಮೂಲಕ ಫೇಶಿಯಲ್ ಅಥೆಂಟಿಕೇಶನ್ ಇಕೆವೈಸಿ  ಮಾಡಿಕೊಳ್ಳಬಹುದು.

ಜೂನ್ 30 ರೊಳಗೆ ಪಿಎಂ ಕಿಸಾನ್ ಇ ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದಲ್ಲಿ 14 ಕಂತು ಬಾರದು. ನಟರಾಜ್ಜಂಟಿ ಕೃಷಿ ನಿರ್ದೇಶಕರು ಉತ್ತರಕನ್ನಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net