ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ : ಕುಮಾರಸ್ವಾಮಿ ಹೀಗಂದಿದ್ದು ಯಾಕೆ ?

HDK_Gurantee
Published on

ತುಮಕೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಹಳ್ಳಿಯ ತಾಯಂದಿರು ದಾರಿ ತಪ್ಪಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ತುರುವೇಕೆರೆ ಪಟ್ಟಣದಲ್ಲಿ ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ ಪರ ರೋಡ್ ಶೋ ನಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯ ಸಮಯದಲ್ಲಿ ಐದು ಗ್ಯಾರಂಟಿಯೋಜನೆಗಳನ್ನು ಘೋಷಣೆ ಮಾಡಿತು. ಇದರಿಂದಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ. ಗ್ಯಾರಂಟಿಯಿಂದ ನಿಮ್ಮ ಕುಟುಂಬದ ಬದುಕು ಏನಾಗಬೇಕು? ಎಂಬುವುದನ್ನು ಎಲ್ಲರು ಯೋಚನೆ ಮಾಡಬೇಕಿದೆ. ಕಾಂಗ್ರೆಸ್‌ಗೆ ಐದು ಗ್ಯಾರಂಟಿ ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.

ಎನ್‌ಡಿಎ ಅಭ್ಯರ್ಥಿ ವಿ.ಸೋಮಣ್ಣ, ಶಾಸಕರಾದ ಎಂ.ಟಿ.ಕೃಷ್ಣಪ್ಪ, ಸಿ.ಬಿ.ಸುರೇಶ್‌ಬಾಬು, ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶಗೌಡ, ಮಾಜಿ ಸಚಿವ ಗೋಪಾಲಯ್ಯ, ಬಿ.ಸಿ.ನಾಗೇಶ್, ಮಾಜಿ ಶಾಸಕರಾದ ಮಸಾಲೆ ಜಯರಾಂ, ಎಂ.ಡಿ.ಲಕ್ಷ್ಮೀನಾರಾಯಣ, ಎಸ್.ಡಿ.ದಿಲೀಪ್‌ಕುಮಾರ್, ಬಿ.ಎಸ್.ನಾಗರಾಜು, ಎಚ್.ನಿಂಗಪ್ಪ ಮತ್ತಿತರರು ಇದ್ದರು.

ಜೆಡಿಎಸ್ ಉಳಿಯಲ್ಲ ಬಾಗಿಲೇ ಮುಚ್ಚಿಬಿಡ್ತಾರೆ ಅಂತಾ ಲಘುವಾಗಿ ಮಾತನಾಡಿದ್ದರು. ಈ ಹಿಂದೆ ನಾವು ಬಿಎಸ್ವೈ ಸರ್ಕಾರ ರಚಿಸಿದ್ದಾಗ, ಇನ್ನು 20 ತಿಂಗಳ ಮುಂದುವರೆದಿದ್ದರೆ ಅವತ್ತೆ ಕಾಂಗ್ರೆಸ್ ಬಾಗಿಲು ಮುಚ್ಚಬೇಕಿತ್ತು. ಆಗ ನಾನು ಸಿಎಂ ಸ್ಥಾನ ಬಿಟ್ಟುಕೊಡದಿದ್ದಕ್ಕೆ ಒಂದು ರೀತಿ ವನವಾಸ ಅನುಭವಿಸಿದ್ದೇನೆ. ಆ ನಂತರ ಬಿಜೆಪಿಯ ಬಿ ಟೀಂ ಅನ್ನುವ ಅಪಪ್ರಚಾರದ ಮೂಲಕ ಜೆಡಿಎಸ್ ಮುಗಿಸುವ ಪ್ರಯತ್ನ ನಡೆಸಿದ್ದರು. ಇನ್ನೂ 10, 20 ವರ್ಷ ಇರುತ್ತೀವಿ ಅನ್ನುವ ಭ್ರಮೆಯಲ್ಲಿದ್ದಾಗ ಜನರು 79 ಸ್ಥಾನಕ್ಕೆ ಇಳಿಸಿದರು. ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net