ಕುಮಾರಸ್ವಾಮಿ 13ರಂದು ರಾಣೆಬೆನ್ನೂರಿಗೆ

JDS LEADER MANJUNATH SPEAK
Published on

ರಾಣೆಬೆನ್ನೂರ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಏ. 13ರಂದು ನಗರಕ್ಕೆ ಆಗಮಿಸಲಿಸಲಿದ್ದಾರೆ.
ಜೆಡಿಎಸ್ ಪಕ್ಷದ ಪಂಚರತ್ನ ಯೋಜನೆ ಕುರಿತು ಪ್ರಚಾರ ನಡೆಸಲಿದ್ದಾರೆ ಎಂದು ಪಕ್ಷದ ರಾಣೆಬೆನ್ನೂರ ಕ್ಷೇತ್ರದ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣನವರ ತಿಳಿಸಿದರು.
ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಂದು ಸಂಜೆ 4 ಗಂಟೆಗೆ ನಗರದ ಮುನ್ಸಿಪಲ್ ಮೈದಾನದಲ್ಲಿ ಬಹಿರಂಗ ಸಭೆ ನಡೆಯಲಿದೆ.

ಕುಮಾರಸ್ವಾಮಿ ಮೆರವಣಿಗೆ

ಇದಕ್ಕೂ ಮುನ್ನ ನಗರಕ್ಕೆ ಆಗಮಿಸುವ ಅವರನ್ನು ಕೆಇಬಿ ಗಣೇಶ ದೇವಸ್ಥಾನದಿಂದ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು.
ಅವರ ಜತೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮತ್ತಿತರರ ಆಗಮಿಸಲಿದ್ದಾರೆ.
ಈಗಿರುವ ಶಾಸಕರು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಜನತೆ ಆರೋಪ ಮಾಡುತ್ತಿದ್ದಾರೆ.
ನಗರ ಹಾಗೂ ತಾಲೂಕಿನಲ್ಲಿ ಏನು ಸಮಸ್ಯೆಗಳಿವೆ ಎಂಬುದನ್ನು ತಿಳಿಯಬೇಕು.
ಆದ್ದರಿಂದ ನಾನು ಪಾದಯಾತ್ರೆ ಮಾಡಿ ಜನತೆ ಸಮಸ್ಯೆ ತಿಳಿದಿದ್ದೇನೆ. ಅವುಗಳನ್ನು ಕುಮಾರಸ್ವಾಮಿಯವರಿಗೆ ಮತ್ತೊಂದು ಬಾರಿ ಪಟ್ಟಿ ಮಾಡಿ ಸಲ್ಲಿಸುತ್ತೇನೆ ಎಂದರು.
ಪಕ್ಷದ ರಾಜ್ಯ ವಕ್ತಾರ ಮಹೇಶಗೌಡ, ಮಹೇಶ ಹೊನ್ನಜ್ಜನವರ, ಸಿದ್ದಪ್ಪ ಗುಡಿಮುಂದ್ಲರ, ಸೈಯದ್ ಸೌದಾಗರ, ಸೈಯದ್ ಹರಿಹರ, ಅಶ್ಪಕ್ ಪೌಜಗಾರ, ಸುನ್ನಾಖಾನ್ ಮುಲ್ಲಾ, ಬಸವರಾಜ ಕೊಪ್ಪದ, ಮಲ್ಲಿಕಾರ್ಜುನ ಹಲಗೇರಿ, ಚಂದ್ರು ಭರಮಗೌಡ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net