

ಕಡಬ: ಕುಮಾರಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳೇ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ವಾರ್ಷಿಕ ಕಲೋತ್ಸವ ಸಂಭ್ರಮ ಅಂಗವಾಗಿ ವಾರ್ಷಿಕ ಕ್ರೀಡಾಕೂಟ ಇತ್ತೀಚೆಗೆ ನಡೆಯಿತು. ಕ್ರೀಡಾಜ್ಯೋತಿಯೊಂದಿಗೆ ಪ್ರಗತಿಪರ ಕೃಷಿಕ ಸುಬ್ರಾಯ ನಿಡ್ವಣ್ಣಾಯ ಬಂಬಿಲ ಉದ್ಘಾಟಿಸಿದರು. ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಬಾಳಪ್ಪ ಪೂಜಾರಿ ಬಂಬಿಲದೋಳ ಅಧ್ಯಕ್ಷತೆ ವಹಿಸಿದ್ದರು.
ಎಸ್.ಡಿ.ಎಂ.ಸಿ. ಅಧ್ಯಕ್ಷ ಸುಂದರ ಕೆ, ತಾಪಂ ಮಾಜಿ ಅಧ್ಯಕ್ಷೆ ರಾಜೇಶ್ವರಿ, ಎ.ಪಿ.ಎಂ.ಸಿ. ಪುತ್ತೂರು ಮಾಜಿ ಸದಸ್ಯ ಸೋಮನಾಥ ಡಿ.ಕನ್ಯಾಮಂಗಲ, ಸವಣೂರು ಗ್ರಾ.ಪಂ. ಸದಸ್ಯರಾದ ಶೀನಪ್ಪ ಶೆಟ್ಟಿ ನೆಕ್ರಾಜೆ, ಗಿರಿಶಂಕರ ಸುಲಾಯ, ಯಶೋದಾ ನೂಜಾಜೆ, ಹಳೇ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಮಕೃಷ್ಣ ವಿ.ಯು, ಗೌರವ ಸಲಹೆಗಾರ ವಿಶ್ವನಾಥ ಕನ್ಯಾಮಂಗಲ, ಕೋಶಾಧಿಕಾರಿ ಪುಟ್ಟಣ್ಣ ಬಂಬಿಲ, ಜತೆ ಕಾರ್ಯದರ್ಶಿ ಉಮೇಶ್ ಬೇರಿಕೆ, ಉದ್ಯಮಿ ಪ್ರಕಾಶ್ ರಾಜ್ ನೂಜಾಜೆ, ಕಡಬ ಪೊಲೀಸ್ ಸಿಬ್ಬಂದಿ ಹರೀಶ್ ತೋಟತಡ್ಕ ಉಪಸ್ಥಿತರಿದ್ದರು.
ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಕೀಲ ಮಹೇಶ್ ಕೆ.ಸವಣೂರು ಸ್ವಾಗತಿಸಿದರು. ಶಾಲೆಯ ಮುಖ್ಯಶಿಕ್ಷಕ ಸಂತೋಷ್ ಎನ್.ಟಿ. ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಶ್ಯಾಮ್ ಕೆ. ವಂದಿಸಿದರು. ಅತಿಥಿ ಶಿಕ್ಷಕಿ ಕಾವ್ಯಶ್ರೀ ಸಹಕರಿಸಿದರು.