

ಸುಬ್ರಹ್ಮಣ್ಯ: ಕುಲ್ಕುಂದ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಮಾ.3 ಮತ್ತು 4ರಂದು ಮಹಾವಿಷ್ಣುಮೂರ್ತಿ ದೈವದ 56ನೇ ವರ್ಷದ ಒತ್ತೆಕೋಲ ಮತ್ತು 10ನೇ ವರ್ಷದ ಶ್ರೀ ಕೊರತಿಯಮ್ಮ ದೈವದ ನೇಮ ನಡೆಯಲಿದೆ. ಒತ್ತೆಕೋಲ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ದೈವಸ್ಥಾನದಲ್ಲಿ ಭಾನುವಾರ ಬಿಡುಗಡೆಗೊಳಿಸಲಾಯಿತು. ದೈವಸ್ಥಾನದ ಮುಖ್ಯ ಪೂಜಾರಿ ರಾಮಚಂದ್ರ ಮಣಿಯಾಣಿ ಪ್ರಾರ್ಥನೆ ಸಲ್ಲಿಸಿ ಆಮಂತ್ರಣಕ್ಕೆ ಪೂಜೆ ಮಾಡಿದರು.
ದೈವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ರವೀಂದ್ರ ಕುಮಾರ್ ರುದ್ರಪಾದ, ಗೌರವಾಧ್ಯಕ್ಷ ಎಂ.ಚಂದ್ರಹಾಸ ಭಟ್, ಕಾರ್ಯಾಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯದರ್ಶಿ ರಾಜೇಶ್ ಎನ್.ಎಸ್., ಆಡಳಿತ ಮಂಡಳಿ ಸದಸ್ಯರಾದ ಗೋಪಾಲ್ ಮಲೆ, ರಾಜೇಶ್ ಕಾಶಿಕಟ್ಟೆ, ರಾಜೇಶ್ ಕುಲ್ಕುಂದ, ರವಿ ಕಕ್ಕೆಪದವು, ಮಹಾಬಲ ರೈ, ನವೀನ್ ಮಣಿ, ಕಷ್ಣ ಮಣಿಯಾಣಿ, ಜಯಪ್ರಕಾಶ್ ಜಾಡಿಮನೆ, ಬಸವನಮೂಲೆ ಬಸವೇಶ್ವರ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಗಿರಿಧರ ಸ್ಕಂದ, ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.