ಶ್ರೀ ದೇವಳದಲ್ಲಿ ನಾಗರಾಜನಿಗೆ ಗಾನ ಸೇವೆ

gana seve
ಶ್ರೀ ದುರ್ಗಾ ಭಜನಾ ಮಂಡಳಿ ಮರಕತ ಅವರಿಂದ ಗಾನಸೇವೆ ನೆರವೇರಿತು.
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಹಕಾರದೊಂದಿಗೆ ಸುಬ್ರಹ್ಮಣ್ಯದ ವಿದ್ಯಾಸಾಗರ ಭಜನಾ ಸಂಗಮದ ವತಿಯಿಂದ ನಾಗರಪಂಚಮಿಯಂದು ನಾಗರಾಜನಿಗೆ ಗಾನಸೇವೆ ನೆರವೇರಿತು. ಶ್ರೀ ದೇವಳದ ಧರ್ಮ ಸಮ್ಮೇಳನ ಮಂಟಪದಲ್ಲಿ ಭಜನಾ ಕಾರ್ಯಕ್ರಮದಲ್ಲಿ 11 ತಂಡಗಳು ಬೆಳಗ್ಗೆ 6ರಿಂದ ರಾತ್ರಿ 8.30 ತನಕ ಸತತ 14.30 ಗಂಟೆ ಗಾನಸೇವೆ ಸಮರ್ಪಿಸಿತು. ಕಲಾವಿದರಾದ ಗಣೇಶ್ ಪರ್ವತಮುಖಿ ಸೇರಿದಂತೆ ವಿದ್ಯಾಸಾಗರ ಭಜನಾ ಸಂಗಮದ ಕಲಾವಿದರು, ದೇವಳ ಸಿಬ್ಬಂದಿ, ಭಕ್ತರು ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net