ಕಾಸರಗೋಡು: ಶಾಸಕರ ಅನುದಾನ ಬಳಸಿ 35 ಲಕ್ಷ ರೂ. ವೆಚ್ಚದಲ್ಲಿ ಬಾನಂ ಸರ್ಕಾರಿ ಪ್ರೌಢಶಾಲೆಯಲ್ಲಿ ನಿರ್ಮಿಸಿರುವ ಸಭಾಭವನವನ್ನು ಶಾಸಕ ಇ.ಚಂದ್ರಶೇಖರನ್ ಉದ್ಘಾಟಿಸಿದರು. ಜಿಪಂ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು.
ಅತ್ಯುತ್ತಮ ಮಹಿಳೆಯರಿಗಾಗಿರುವ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಜಿಪಂ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅವರನ್ನು ಶಾಸಕ ಇ. ಚಂದ್ರಶೇಖರನ್ ಸನ್ಮಾನಿಸಿದರು. ರಾಜ್ಯಮಟ್ಟದ ಹಗ್ಗಜಗ್ಗಾಟ ಚಾಂಪಿಯನ್‌ಷಿಪ್ ವಿಜೇತ ಮಕ್ಕಳನ್ನು ಪರಪ್ಪ ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಎಂ.ಲಕ್ಷ್ಮೀ ಸನ್ಮಾನಿಸಿದರು.
ಲಿಟಲ್ ಕೈಟ್ಸ್ ಜರ್ಸಿಯನ್ನು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಬಿಡುಗಡೆಗೊಳಿಸಿದರು. ಬೇಲೂರು ಗ್ರಾಪಂ ಅಧ್ಯಕ್ಷೆ ಪಿ.ಶ್ರೀಜಾ, ಪರಪ್ಪ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಕೆ.ಭೂಪೇಶ್, ಬೇಲೂರು ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಗೋಪಾಲಕೃಷ್ಣನ್, ಡಿಡಿಇ ಪ್ರತಿನಿಧಿ ವಿ.ಶ್ರೀಜಿತ್, ಪಿ.ಮನೋಜ್ ಕುಮಾರ್, ಬಾನಂ ಕೃಷ್ಣನ್, ವಿ.ಎನ್.ಮಿನಿ, ಕೆ.ಎನ್.ಭಾಸ್ಕರನ್, ಪಚ್ಚೇನಿ ಕೃಷ್ಣನ್, ವಿ.ಓಮನಾ, ಪಿ.ಕೆ.ಬಾಲಚಂದ್ರನ್, ಅನೂಪ್ ಪೆರಿಯಾಲ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಸಿ.ಕೋಮಲವಳ್ಳಿ ಸ್ವಾಗತಿಸಿದರು.ಕಾರ್ಯದರ್ಶಿ ಕೆ.ಭಾಗ್ಯೇಶ್ ವಂದಿಸಿದರು.