ಕುಕ್ಕೆ ಗಣೇಶೋತ್ಸವ ಆಮಂತ್ರಣ ಬಿಡುಗಡೆ

New Project
Published on

ಸುಬ್ರಹ್ಮಣ್ಯ: ಸಾರ್ವಜನಿಕ ಗಣೇಶೋತ್ಸವ ಸಮಿತಿ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ಗಣೇಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಕಾಶಿಕಟ್ಟೆ ಮಹಾಗಣಪತಿ ದೇವಸ್ಥಾನದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು.

ಸಮಿತಿ ಸಂಚಾಲಕ ಎ.ವೆಂಕಟ್ರಾಜ್ ಆಮಂತ್ರಣ ಬಿಡುಗಡೆಗೊಳಿಸಿದರು. ಕಾಶಿಕಟ್ಟೆ ಮಹಾಗಣಪತಿಗೆ ಸಮಿತಿ ವತಿಯಿಂದ ರಂಗಪೂಜೆ ಸೇವೆ ಸಮರ್ಪಿಸಲಾಯಿತು. ಸಮಿತಿ ಅಧ್ಯಕ್ಷ ಕೆ.ಯಜ್ಞೇಶ್ ಆಚಾರ್ ಸಂಕಲ್ಪ ನೆರವೇರಿಸಿ ಪ್ರಾರ್ಥಿಸಿದರು. ಅರ್ಚಕ ಪ್ರಸಾದ್ ಕಲ್ಲೂರಾಯ ಪೂಜೆ ನೆರವೇರಿಸಿದರು.

ಸಮಿತಿ ಸಂಚಾಲಕ ರಾಜೇಶ್ ಎನ್.ಎಸ್., ಕೃಷ್ಣಾಷ್ಟಮಿ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ವಾನಾಡು, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಪ್ರಧಾನ ಕಾರ್ಯದರ್ಶಿ ರತ್ನಾಕರ ಎಸ್., ಕಾರ್ಯದರ್ಶಿ ದೀಪಕ್ ನಂಬಿಯಾರ್, ನಿಕಟಪೂರ್ವಾಧ್ಯಕ್ಷ ದಿನೇಶ್ ಮೊಗ್ರ, ಪೂರ್ವಾಧ್ಯಕ್ಷರಾದ ಉಮೇಶ್ ಕೆ.ಎನ್., ಲೋಕೇಶ್ ಬಿ.ಎನ್., ಲೋಕೇಶ್ ಎನ್.ಎಸ್., ಗಣೇಶ್ ಪ್ರಸಾದ್ ಎನ್., ದಿನೇಶ್ ಸಂಪ್ಯಾಡಿ, ಚಿದಾನಂದ ಕಂದಡ್ಕ, ವೆಂಕಟೇಶ್ ಎಚ್.ಎಲ್., ಉಪಾಧ್ಯಕ್ಷರಾದ ಅಚ್ಚುತ್ತ ಗೌಡ, ಯಶೋದಾಕೃಷ್ಣ ನೂಚಿಲ, ಪ್ರಮುಖರಾದ ಅಶೋಕ್ ಕುಮಾರ್ ಮೂಲೆಮಜಲು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net