ದರೋಡೆಕೋರನ ಬಂಧನ

New Project (31)
Published on

ಉಪ್ಪಿನಂಗಡಿ: ಕಳೆದ ಜೂನ್4ರಂದು ನೆಲ್ಯಾಡಿ ಗ್ರಾಮದ ಪಡುಬೆಟ್ಟು ಎಂಬಲ್ಲಿ ಅಲಿಮಮ್ಮ(65) ಎಂಬುವರ ಕುತ್ತಿಗೆಯಿಂದ 10 ಪವನ್ ಚಿನ್ನಾಭರಣವನ್ನು ಕಿತ್ತೊಯ್ದ ಪ್ರಕರಣದ ಆರೋಪಿ ಸುಳ್ಯದ ಅಲೆಟ್ಟಿ ನಿವಾಸಿ ಅಬ್ದುಲ್ ರಹಿಮಾನ್(31) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಆತನಿಂದ ಬೈಕ್ ಹಾಗೂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಆರೋಪಿ ಚಿನ್ನಾಭರಣ ಎಗರಿಸಲು ಬಳಸಿದ ಬೈಕ್ ಕೂಡಾ ಕಳವುಗೈದ ಬೈಕಾಗಿದ್ದು, ಬೈಕ್ ಕಳವಾಗಿರುವ ಬಗ್ಗೆ ಮೈಸೂರು ನಗರದ ವಿಜಯನಗರ ಪೊಲೀಸ್ ಠಾಣೆಯಲ್ಲಿ ದ್ವಿಚಕ್ರ ವಾಹನ ಕಳ್ಳತನದ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net