ಕುಕನೂರು, ಮಂಗಳೂರಿನಲ್ಲಿ ಆರೋಗ್ಯ ಮೇಳ

26KKNR-05
ಕುಕನೂರು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಯುತ್ತಿರುವ ಆರೋಗ್ಯ ಮೇಳಕ್ಕೆ ಡಿಹೆಚ್‌ಓ ಡಾ. ಟಿ.ಲಿಂಗರಾಜು ಭೇಟಿ ನೀಡಿ ಪಶೀಲಿಸಿದರು.
Published on

ಕುಕನೂರು: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಹಾಗೂ ತಾಲೂಕಿನ ಮಂಗಳೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜಿಲ್ಲಾಡಳಿತ, ಜಿಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಇಲಾಖೆ ಆಶ್ರಯದಲ್ಲಿ ನಡೆಯುತ್ತಿರುವ ಆರೋಗ್ಯ ಮೇಳಕ್ಕೆ ಡಿಹೆಚ್‌ಓ ಡಾ. ಟಿ.ಲಿಂಗರಾಜು ಮಂಗಳವಾರ ಭೇಟಿ ನೀಡಿದರು.

ನಂತರ ಮಾತನಾಡಿ, ಈ ಕಾರ್ಯಕ್ರಮ ಸಾರ್ವಜನಿಕರಿಗೆ ಅತಿ ಮಹತ್ವವಾಗಿದ್ದು, ಮೇಳದಲ್ಲಿ ತಾಯಿ ಮಕ್ಕಳ ಆರೋಗ್ಯ ಕಾರ್ಯಕ್ರಮ, ಆಯುಷ್ಮಾನ್ ಭವ ಆರೋಗ್ಯ ಕಾರ್ಡ್ ವಿತರಣೆ, ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳ ಖಾಯಿಲೆಗಳ ಬಗ್ಗೆ, ಕಣ್ಣಿನ ತೊಂದರೆ, ಚರ್ಮ ಖಾಯಿಲೆ, ಇತರೆ ಖಾಯಿಲೆಗಳ ಆರೋಗ್ಯ ತಪಾಸಣೆ ಮಾಡಿ ಚಿಕಿತ್ಸೆ ನೀಡಲಾಗುತ್ತದೆ.

ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದರು. ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಎಲ್ಲ ಕಾರ್ಯಕ್ರಮ ಅನುಷ್ಠನಾಧಿಕಾರಿಗಳು, ತಾಲೂಕಾ ಆರೋಗ್ಯಾಧಿಕಾರಿಗಳು, ಕೊಪ್ಪಳ ಮೆಡಿಕಲ್ ಕಾಲೇಜಿನ ತಜ್ಞವೈದ್ಯರು, ವೈದ್ಯಾಧಿಕಾರಿಗಳು, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ, ಆಶಾಕಾರ್ಯಕರ್ತೆಯರು ಮತ್ತು ಸಿಬ್ಬಂದಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net