More

    ಲಕ್ಕುಂಡಿ ಆರೋಗ್ಯ ಮೇಳ ಕಾರ್ಯಕ್ರಮ

    ಗದಗ: ಆಯುರ್ವೇದ ಪ್ರಕಾರ ಮನುಷ್ಯರಲ್ಲಿ ರೋಗ ಉಂಟಾಗಲು ಆಹಾರ, ಆಹಾರದ ಕ್ರಮ, ವಿಹಾರ ಮುಖ್ಯ ಕಾರಣವಾಗಿದ್ದು ನಿಯಮಿತ, ಸಮುಚಿತ ಆಹಾರ ವಿಹಾರಗಳಿಂದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಸೊರಟೂರು ಆಯುಷ್ಮಾನ್​ ಆರೋಗ್ಯ ಮತ್ತು ೇಮ ಕೇಂದ್ರದ ವೈಧ್ಯಾಧಿಕಾರಿ ಡಾ. ಸಾಯಿಪ್ರಕಾಶ ಮಡಿವಾಳರ ಹೇಳಿದರು.
    ತಾಲೂಕಿನ ಲಕ್ಕುಂಡಿ ಗ್ರಾಮದ ಅನ್ನದಾನೀಶ್ವರ ಸಮುದಾಯ ಭವನದಲ್ಲಿ ಆಯುಷ್ಮಾನ ಭವ ಆಯುಷ್​ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಆರೋಗ್ಯಕ್ಕೆ ಹಾಗೂ ಅನಾರೋಗ್ಯಕ್ಕೆ ಶರೀರವನ್ನು ಪ್ರತಿನಿಧಿಸುವ ವಾತ, ಪಿತ್ತ ಕಗಳೆಂಬ ಅಂಶಗಳು ನೈಸಗಿರ್ಕ ಬದಲಾವಣೆಗಳಿಂದ ಏರು ಪೇರು ಆದರೆ ಆನಾರೋಗ್ಯ ಉಂಟಾಗುತ್ತದೆ. ಆದ್ದರಿಂದ ದೇಹದಲ್ಲಿ ಅನಾವಶ್ಯಕ ಅಂಶಗಳನ್ನು ಆಯುರ್ವೇದದ ಪಂಚಕರ್ಮದ ಮೂಲಕ ಹೊರಹಾಕುವುದರಿಂದ ಬರಲಿರುವ ರೋಗಗಳನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದರು.
    ಅಸುಂಡಿಯ ಹೋಮಿಯೋಪಥಿಕ್​ ವೈಧ್ಯರಾದ ಡಾ. ಸಂಜೀವ ನಾರಪ್ಪನವರ ಮಾತನಾಡಿ ಆಯುರ್ವೇದ ಮತ್ತು ಹೋಮಿಯೋಪಥೀಕ್​ ಔಷಧಿಗಳು ಖಾಲಿ ಹೊಟ್ಟೆಯಲ್ಲಿ ಸೇವೆಸಿದರೆ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ರೋಗಗಳು ವಾಸಿಯಾಗುತ್ತವೆ ಎಂದರು.
    ಚಿಕ್ಕಹಂದಿಗೋಳದ ಸರ್ಕಾರಿ ಆಯುರ್ವೇದ ಚಿಕಿತ್ಸಾ ಕೇಂದ್ರದ ವೈಧ್ಯಾಧಿಕಾರಿ ಕಮಲಾಕರ ಅರಳೆ ಮಾತನಾಡಿ, ಕರ್ನಾಟಕ ಕರ್ನಾಟಕ ಆಯುಷ್​ ಇಲಾಖೆಯು ಲಕ್ಕುಂಡಿ ಗ್ರಾಮದಲ್ಲಿ ಕರೋನಾ ರೋಗದ ಸಂದರ್ಭದಲ್ಲಿ ಹಲವು ಔಷಧಿಗಳನ್ನು ವಿತರಿಸಲಾಗಿದೆ. ಉಚಿತ ಆರೋಗ್ಯ ಶಿಬಿರ, ಮನೆ ಮದ್ದು ಶಿಬಿರ, ಶಾಲಾ ಮಕ್ಕಳ ಶಿಬಿರ ಏರ್ಪಡಿಸಲಾಗಿದೆ. ಇನ್ನೂ ರಾಜ್ಯದಲ್ಲಿಯೇ ಜಿಮ್ಸ ಸಂಯುಕ್ತ ಆಸ್ಪತ್ರೆಯು ಮೊದಲ ಸ್ಥಾನದಲ್ಲಿದ್ದು ಪಂಚಕರ್ಮ ಪದ್ಧತಿಯಿಂದ ರೋಗವನ್ನು ವಾಸಿ ಮಾಡಲಾಗುತ್ತಿದೆ ಎಂದರು.
    ಯೋಗ ಶಿಕ್ಕರಾದ ಸುಧಾ ಪಾಟೀಲ ಮತ್ತು ಶೋಭಾ ದೊಡ್ಡವಾಡ ಶಿಬಿರಾಥಿರ್ಗಳಿಗೆ ಸರಳ ಯೋಗವನ್ನು ಹೇಳಿಕೊಟ್ಟರು. ಯುವಕರು ರಕ್ತದಾನ ಮಾಡಿದರು. ಪಾಪನಾಶಿಯ ಆಯುಷ್​ ಆರೋಗ್ಯ ಮತ್ತು ೇಮ ಕೇಂದ್ರದ ವೈಧ್ಯಾಧಿಕಾರಿ ಅಶೋಕ ಮತ್ತಿಗಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ರೋಗಿಗಳು ತಪಾಸಣೆಗೆ ಓಳಪಟ್ಟರು. ಗ್ರಾಪಂ ಮಾಜಿ ಅಧ್ಯ ಎಸ್​.ಎಂ. ಬೂದಿಹಾಳ ಅಧ್ಯತೆ ವಹಿಸಿದ್ದರು. ಡಾ ಮೀನಾ ಮತ್ತಿಗಟ್ಟಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts