ಕ್ಷೇತ್ರದ ರೈತರ ಆರ್ಥಿಕ ಬಲಿಷ್ಠತೆಗೆ ಶ್ರಮಿಸುವೆ

HALAPPA ACHAR
ಕುಕನೂರು ತಾಲೂಕಿನ ಮಸಬಹಂಚಿನಾಳದಲ್ಲಿ ಕುಕನೂರಿನ ಕಾಂಗ್ರೆಸ್ ಮುಖಂಡ ಮಂಜುನಾಥ ಮ್ಯಾದಾರ ಹಾಗೂ ಅವರ ಬಳಗದವರು ಸಚಿವ ಹಾಲಪ್ಪ ಆಚಾರ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
Published on

ಕುಕನೂರು: ನಾನೂ ಒಬ್ಬ ರೈತನಾಗಿದ್ದು, ಕ್ಷೇತ್ರದ ಕೃಷಿಕರ ಆರ್ಥಿಕ ಬಲಿಷ್ಠತೆಗೆ ಶ್ರಮಿಸುವ ಕೆಲಸ ಮಾಡುತ್ತೇನೆ ಎಂದು ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದಲ್ಲಿ ಕಾಂಗ್ರೆಸ್ ಮುಖಂಡರನ್ನು ಬಿಜೆಪಿಗೆ ಬರಮಾಡಿಕೊಂಡು ಮಾತನಾಡಿದರು.
ರೈತರ ಕಷ್ಟ, ನಷ್ಟಗಳನ್ನು ನಾನು ನೋಡಿದ್ದು, ರೈತರಿಗೋಸ್ಕರ ಕೆಲಸ ಮಾಡುತ್ತಿದ್ದೇನೆ.

ಬಯಲು ಸೀಮೆ ಪ್ರದೇಶದವಾದ ಯಲಬುರ್ಗಾ ಕ್ಷೇತ್ರದಲ್ಲಿ ರೈತ ವರ್ಗ ಸದಾ ಬರಗಾಲಕ್ಕೆ ತುತ್ತಾಗುತ್ತಿದೆ. ಮಳೆ ಇಲ್ಲದೆ ಇಳುವರಿ ಬರುತ್ತಿಲ್ಲ. ಹಿಂದಿನಿಂದ ಆಡಳಿತ ಮಾಡಿಕೊಂಡು ಬಂದ ಶಾಸಕರು, ಕೃಷಿಕರ ಕಷ್ಟ ಅರಿಯಲಿಲ್ಲ. 20-25 ವರ್ಷದ ಹಿಂದೆ ತುಂಗಭದ್ರಾ ಡ್ಯಾಂನಲ್ಲಿ ಉಳಿಕೆ ನೀರು ಸಾಕಷ್ಟು ಇತ್ತು. ಅದನ್ನು ಯಾರು ಕೇಳುವವರಿದಿಲ್ಲ.

ಯಲಬುರ್ಗಾ ಕ್ಷೇತ್ರಕ್ಕೆ ಆ ನೀರು ತರಬಹುದಾಗಿತ್ತು. ಆದರೆ, ಅಂತಹ ಕೆಲಸ ಹಿಂದಿನವರಿಂದ ಆಗಲಿಲ್ಲ. ಆ ನಿಟ್ಟಿನಲ್ಲಿ ನಾನು ಬೇವೂರಿನಲ್ಲಿ 2012ರಲ್ಲಿ ಕೃಷ್ಣ ಬೀ ಸ್ಕೀಂಗೆ ಅಡಿಗಲ್ಲು ಹಾಕಿಸಿದೆ. ನಂತರ ನನೆಗುದಿಗೆ ಬಿದ್ದಿದ್ದ ಕೃಷ್ಣ ಬೀ ಸ್ಕೀಂ ಕಾಮಗಾರಿ ಆರಂಭಿಸಿ ಯಲಬುರ್ಗಾ ಕ್ಷೇತ್ರಕ್ಕೆ ನೀರು ತಂದಿದ್ದೇನೆ ಎಂದರು.

ಸದಾ ಜನರೊಂದಿಗೆ ಇದ್ದು, ಜನಪರ ಕೆಲಸಕ್ಕೆ ಅರ್ಪಿತನಾಗಿದ್ದೇನೆ. ಎಲ್ಲೋ ಬೆಂಗಳೂರು, ಧಾರವಾಡದ ಮನೆಗಳಲ್ಲಿ ಹೋಗಿ ನಾನು ವಾಸವಿರುವುದಿಲ್ಲ. ಮತಗಳನ್ನು ನೀಡಿದ ಜನರ ಮಧ್ಯೆಯೇ ಇದ್ದು ಕೆಲಸ ಮಾಡುತ್ತೇನೆ ಎಂದರು. ಕಾಂಗ್ರೆಸ್ ಮುಖಂಡ ಮಂಜುನಾಥ ಮ್ಯಾದಾರ ಹಾಗೂ ಮ್ಯಾದಾರ ಮಂಜುನಾಥ ಅಭಿಮಾನಿ ಬಳಗದವರು ಬಿಜೆಪಿಗೆ ಸೇರ್ಪಡೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net