ಮಂದಾರ್ತಿಯಲ್ಲಿ ಕುಡುಬಿ ಸಂಘ ಮಹಾಸಭೆ

kduubi
ಮಂದಾರ್ತಿಯ ಕುಡುಬಿ ವಿವಿಧೋದ್ದೇಶ ಸಹಕಾರಿ ಸಂಘದ ಮಹಾಸಭೆಯಲ್ಲಿ ನಿವೃತ್ತ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ. ಅವರನ್ನು ಸನ್ಮಾನಿಸಲಾಯಿತು
Published on

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ಮಂದಾರ್ತಿ ಕುಡುಬಿ ವಿವಿಧೋದ್ದೇಶ ಸಹಕಾರಿ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಮಂದಾರ್ತಿ ಶೇಡಿಕೊಡ್ಲು ದುರ್ಗಾ ಸಭಾಂಗಣದಲ್ಲಿ ನಡೆಯಿತು.

ಸಂಘದ ಅಧ್ಯಕ್ಷ ವಿಜಯ ನಾಯ್ಕ ಹೆಸ್ಕುಂದ ಪಡುಬೆಟ್ಟು ಅಧ್ಯಕ್ಷತೆ ವಹಿಸಿ, ಪ್ರಸಕ್ತ ಸಾಲಿನಲ್ಲಿ ಸಂಘ ಪಾಲು ಬಂಡವಾಳ 64 ಲಕ್ಷ ರೂ., ಠೇವಣಿ 8 ಕೋಟಿ ರೂ., ಬಾಕಿ ಸಾಲ 7.88 ಕೋಟಿ ರೂ., ದುಡಿಯುವ ಬಂಡವಾಳ 10 ಕೋಟಿ ರೂ. ಹೊಂದಿದೆ. ಜತೆಗೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ 75 ಕೋಟಿ ರೂ.ಗೂ ಹೆಚ್ಚಿನ ವ್ಯವಹಾರ ನಡೆಸಿ 30 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.

ಉಪಾಧ್ಯಕ್ಷ ಶೇಖರ ನಾಯ್ಕ ಬಿಲ್ಲಾಡಿ, ನಿರ್ದೇಶಕರಾದ ಎ.ನರಸಿಂಹ ನಾಯ್ಕ ಯಡ್ತಾಡಿ, ಚಂದ್ರ ನಾಯ್ಕ ಗಳಿನಕೊಡ್ಲು, ಬಾಲಕೃಷ್ಣ ನಾಯ್ಕ ಮುದ್ದುಮನೆ, ಗಣಪತಿ ನಾಯ್ಕ ಕಂಡಿಕೆ, ಹೆರಿಯ ನಾಯ್ಕ ಪಡುಜೆಡ್ಡು, ವಿಜಯ ನಾಯ್ಕ ಹೆನ್ನಿ ಕೊಡ್ಜೆಡ್ಡು, ಪಾರ್ವತಿ ಅಂತನಕೊಡ್ಲು, ಪಾರ್ವತಿ ವಿ. ನಾಯ್ಕ ಮಜ್ಜಿಗೆಬೈಲು, ಸಲಹಾ ಸಮಿತಿ ಸದಸ್ಯ ಎ.ಬಾಬಣ್ಣ ನಾಯ್ಕ ಅಲ್ಬಾಡಿ, ಡಾ.ಬೀಸು ನಾಯ್ಕ ಹೆಸ್ಕುಂದ ಪಡುಬೆಟ್ಟು ಉಪಸ್ಥಿತರಿದ್ದರು. ಸಿಇಒ ಸೂರ್ಯ ನಾಯ್ಕ ಲೆಕ್ಕಪತ್ರ, ಆಯ-ವ್ಯಯ ಪತ್ರ ವಾಚಿಸಿ ವಿವರ ನೀಡಿದರು. ಸ್ವಾತಿ ಸ್ವಾಗತಿಸಿದರು. ಪ್ರವೀಣ ನಾಯ್ಕ ವಂದಿಸಿದರು.

ಸ್ಥಳೀಯರಿಗೆ ವೈದ್ಯಕೀಯ ನೆರವು

ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದ ಸದಸ್ಯರ 72 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು. ಜತೆಗೆ 7 ಸ್ಥಳೀಯರಿಗೆ ವೈದ್ಯಕೀಯ ನೆರವು ನೀಡಲಾಯಿತು. ಬಳಿಕ ಸಂಘದ ವತಿಯಿಂದ ಕುಂದಾಪುರ ಉಪವಿಭಾಗದ ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಅರುಣ್ ಕುಮಾರ್ ಎಸ್.ವಿ. ಅವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net