ಸರ್ವೇ ನಿರ್ವಹಿಸಿದ ಸಿಬ್ಬಂದಿಗೆ ಅಭಿನಂದನೆ

Published on

ಕಾಸರಗೋಡು: ನನ್ನ ಭೂಮಿ ಇಂಟಿಗ್ರೇಟೆಡ್ ಪೋರ್ಟಲ್ ಮೂಲಕ ಕಂದಾಯ, ಸರ್ವೇ ಮತ್ತು ನೋಂದಣಿ ಇಲಾಖೆಗಳ ಸೇವೆಗಳನ್ನು ಆನ್‌ಲೈನ್‌ನಲ್ಲಿ ಲಭ್ಯವಾಗುವಂತೆ ಮಾಡಿದ ದೇಶದ ಮೊದಲ ಗ್ರಾಮವಾದ ಕಾಸರಗೋಡು ಜಿಲ್ಲೆಯ ಕುಂಬಳೆಯ ಉಜಾರು-ಉಳುವಾರು ಗ್ರಾಮದ ಡಿಜಿಟಲ್ ಸಮೀಕ್ಷೆ ಚಟುವಟಿಕೆಗಳನ್ನು ನಿರ್ವಹಿಸಿದ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

ತ್ವರಿತ ಗತಿಯಲ್ಲಿ ಸಾಗುತ್ತಿರುವ ಜಿಲ್ಲೆಯ ಡಿಜಿಟಲ್ ಸಮೀಕ್ಷೆಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಕೆ.ಇನ್ಭಾಶೇಖರ್ ಸೂಚಿಸಿದರು. ಡಿಜಿಟಲ್ ಸಮೀಕ್ಷೆ ಜಿಲ್ಲಾಮಟ್ಟದ ಪರಿಶೀಲನೆ ಅಕ್ಟೋಬರ್‌ನಲ್ಲಿ ನಡೆದಿತ್ತು. ಭೂಕಂದಾಯ ಉಪಜಿಲ್ಲಾಧಿಕಾರಿ ಕೆ.ರಾಜನ್, ಸರ್ವೇ ಸಹಾಯಕ ನಿರ್ದೇಶಕ ಆಸಿಫ್ ಅಲಿಯಾರ್ ಮಾತನಾಡಿದರು. ಸಭೆಯಲ್ಲಿ ತಹಸೀಲ್ದಾರರು, ಸರ್ವೇ ಮೇಲ್ವಿಚಾರಕರು, ಗ್ರಾಮಾಧಿಕಾರಿಗಳು, ಮುಖ್ಯ ಸರ್ವೇಯರ್‌ಗಳು, ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net