

ಕಡಬ: ರಾಮಕುಂಜ ಗ್ರಾಮದ ಹಲ್ಯಾರ ನಿವಾಸಿ ಯಾಕೂಬ್ ಮೇಸ್ತ್ರಿಯವರು ದೀಪಾವಳಿ ಪ್ರಯುಕ್ತ ಸುಮಾರು 25 ಮಂದಿ ಕಾರ್ಮಿಕರಿಗೆ ತಲಾ 5 ಕೆ.ಜಿ.ಯಂತೆ ಅಕ್ಕಿ ವಿತರಿಸಿ ಸೌಹಾರ್ದ ಮೆರೆದಿದ್ದಾರೆ.
ಶ್ರೀ ರಾಮಕುಂಜೇಶ್ವರ ಪದವಿ ಕಾಲೇಜಿನ ಮುಂಭಾಗದ ಇಜ್ಜಾವಿನಲ್ಲಿ ಅಕ್ಕಿ ವಿತರಣೆ ನಡೆಯಿತು. ಅತಿಥಿಯಾಗಿದ್ದ ಕಡಬ ಪೊಲೀಸ್ ಠಾಣೆ ಪಿಎಸ್‌ಐ ಅಕ್ಷಯ್ ಢವಗಿ ಮಾತನಾಡಿ, ಎಲ್ಲ ಧರ್ಮದವರೂ ಸೇರಿ ಹಬ್ಬ ಆಚರಿಸುವುದರಿಂದ ಸಮಾಜದಲ್ಲಿ ಸೌಹಾರ್ದ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಹೆಚ್ಚಾಗಿ ನಡೆಯಬೇಕೆಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ನಿವೃತ್ತ ಪ್ರಾಂಶುಪಾಲ ಯಂ.ಸತೀಶ್ ಭಟ್ ಮಾತನಾಡಿ, ಯಾಕೂಬ್ ಉದಾರ ಮನೋಭಾವದಿಂದ ತನ್ನ ಆಶ್ರಯದಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಮಕ್ಕಳಂತೆ ನೋಡಿಕೊಂಡು ಸಮಾಜಕ್ಕೆ ಮಾದರಿಯ ವ್ಯಕ್ತಿಯಾಗಿ ಕಾಣಿಸುತ್ತಾರೆ ಎಂದರು.
ರಾಮಕುಂಜ ಗ್ರಾ.ಪಂ.ಅಧ್ಯಕ್ಷೆ ಸುಚೇತಾ ಬರೆಂಬೆಟ್ಟು, ತುಳು ಚಲನಚಿತ್ರ ನಟ, ನಾಟಕ ಕಲಾವಿದ ರವಿ ರಾಮಕುಂಜ, ಅಬೂಬಕ್ಕರ್ ಸಾಹೇಬ್ ಕುದ್ಲೂರು, ಕಡಬ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಹರೀಶ್ ಮಾತನಾಡಿದರು. ಅಝಿಝ್ ಹಲ್ಯಾರ, ದುರ್ಗಾಪ್ರಸಾದ್ ಸುಣ್ಣಾಲ, ಸುಮನ್, ದೇವಿಕಿರಣ್, ಉಮೇಶ್ ಕಕ್ವೆ, ಹಮೀದ್ ಗೇರುಕಟ್ಟೆ, ಯಾಕೂಬ್ ಗೇರುಕಟ್ಟೆ, ಇಬ್ರಾಹಿಂ ಹಾಜಿ ಉಪಸ್ಥಿತರಿದ್ದರು. ಸಲೀಂ ರಾಮಕುಂಜ ಸ್ವಾಗತಿಸಿ, ನಿರೂಪಿಸಿದರು.