

ಸುಳ್ಯ: ನಗರದ ಗಾಂಧಿ ನಗರದ ಕೆಪಿಎಸ್ ಶಾಲೆಯಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಶಾಸಕಿ ಭಾಗೀರಥಿ ಮುರುಳ್ಯ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಶಿಕ್ಷಣ ಜತೆಯಲ್ಲಿ ಶಿಕ್ಷೆ ಕೂಡ ಇತ್ತು. ಅದರೆ ಈಗ ಕೇವಲ ಶಿಕ್ಷಣ ಮಾತ್ರ ನೀಡಲಾಗುತ್ತದೆ ಇದರಿಂದಾಗಿ ಶಾಲೆ ಬಿಡುವವರ ಸಂಖ್ಯೆ ಕಡಿಮೆಯಾಗಿ ವಿದ್ಯಾರ್ಥಿಗಳು ಶಾಲೆಗೆ ಬರುವಂತೆ ಆಗಿದೆ. ಹತ್ತನೇ ತರಗತಿಯ ಪರೀಕ್ಷೆಯಲ್ಲಿ ವಿಶಿಷ್ಟ ಸಾಧನೆಗೈದ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭ ಹಾರೈಸಿದರು.
ಕೋಟೆ ಫೌಂಡೇಷನ್ ವತಿಯಿಂದ ಕೊಡಲ್ಪಟ್ಟ ಡೆಸ್ಕ್ ಮತ್ತು ಬೆಂಚುಗಳನ್ನು ಮತ್ತು ಸರ್ಕಾರದ ಅನುದಾನದಿಂದ ರಚಿಸಿದ ಸುಸಜ್ಜಿತ ಗಣಕಯಂತ್ರ ವಿಭಾಗಕ್ಕೆ ಚಾಲನೆ ನೀಡಲಾಯಿತು.
ಕ್ಷೇತ್ರ ಶಿಕ್ಷಣಧಿಕಾರಿ ರಮೇಶ್, ಕೋಟೆ ಫೌಂಡೇಷನ್‌ನ ಮುಖ್ಯಸ್ಥ ಪ್ರದೀಪ್ ಹಾಗೂ ಸಂಸ್ಥೆಯ ವಿವಿಧ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.