

ಮಂಗಳೂರು: ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಸಂಗೀತ, ಯಕ್ಷಗಾನ, ನಾಟ್ಯ, ಚಿತ್ರಕಲೆ ಸಹಿತ ವಿವಿಧ ಪಠ್ಯೇತರ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಾಗ ವಿದ್ಯಾರ್ಥಿಗಳ ಮನೋಬಲ ವೃದ್ದಿಯಾಗುತ್ತದೆ. ಹಾಗೂ ಆ ಮೂಲಕ ವಿದ್ಯಾರ್ಥಿಗಳು ಇನ್ನಷ್ಟು ಸಶಕ್ತರಾಗುತ್ತಾರೆ ಎಂದು ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್ ಅವರು ಹೇಳಿದರು.
ದ.ಕ ಹಾಗೂ ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ, ದ.ಕ.ಸಾಹಿತ್ಯ ಪರಿಷತ್ ಉಳ್ಳಾಲ, ಶಾರದ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ತಲಪಾಡಿ ದೇವಿನಗರ ಇವುಗಳ ಆಶ್ರಯದಲ್ಲಿ ತಲಪಾಡಿ ಶಾರದ ವಿದ್ಯಾನಿಕೇತನದ ಸರಸ್ವತಿ ಮಂದಿರದಲ್ಲಿ ಗುರುವಾರ ವಿದ್ಯಾರ್ಥಿಗಳಿಗೆ ಆಯೋಜಿಸಿದ ಭಾವಯಾನ ಕನ್ನಡ ‘ಗೀತ-ಸಂಗೀತ’ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದ.ಕ.ಜಿಲ್ಲಾ ಕ.ಸಾ.ಪ.ಉಳ್ಳಾಲ ವಲಯದ ಅಧ್ಯಕ್ಷ ಡಾ.ಧನಂಜಯ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಚಂದ್ರಹಾಸ್ ರೈ, ದ.ಕ ಹಾಗೂ ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದ ಅಧ್ಯಕ್ಷ ದೀಪಕ್‌ರಾಜ್ ಉಳ್ಳಾಲ್, ಪ್ರಮುಖರಾದ ಕೆರೆಮನೆ ನರಸಿಂಹ ಹೆಗ್ಡೆ, ಪ್ರಾಂಶುಪಾಲ ಸುಷ್ಮಾ ದಿನಕರ್, ಎ.ಮೋಹನ್ ದಾಸ್, ಪ್ರಮುಖರಾದ ಸದಾಶಿವದಾಸ್ ಪಾಂಡೇಶ್ವರ, ಮುರಳೀಧರ ಕಾಮತ್, ಬಾಬು ಜಾರ್ಜ್, ಧನುರಾಜ್, ಮೋಹನ್ ಪ್ರಸಾದ್, ಮೋಹನ್, ಕೇಶವ ಕನಿಲ, ಸತೀಶ್, ಮಲ್ಲಿಕಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ದ.ಕ.ಜಿಲ್ಲಾ ಕ.ಸ.ಪ.ಉಳ್ಳಾಲ ವಲಯದ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್ ಸ್ವಾಗತಿಸಿದರು. ತೋನ್ಸೆ ಪುಷ್ಕಳ ಕುಮಾರ್ ಅವರು ನಿರೂಪಿಸಿದರು. ರಮೇಶ್ ಸಾಲ್ಯಾನ್ ವಂದಿಸಿದರು.
ಖ್ಯಾತ ಗಾಯಕಿ ಸಂಗೀತ ಬಾಲಚಂದ್ರ ಹಾಗೂ ಹಿರಿಯ ಸಂಗೀತ ಕಲಾವಿದ ತೋನ್ಸೆ ಪುಷ್ಕಳ್ ಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರವನ್ನು ನಡೆಸಿಕೊಟ್ಟರು.