ವಾಲ್ಮೀಕಿ ಸಮುದಾಯದ ಭಾವನೆಗೆ ಧಕ್ಕೆ

Untitled design(8)
ಕೂಡ್ಲಿಗಿ ಠಾಣೆಯ ಸಿಪಿಐ ಪ್ರಲ್ಹಾದ್ ಆರ್.ಚನ್ನಗಿರಿಗೆ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾದ ಪದಾಧಿಕಾರಿಗಳು ಗುರುವಾರ ಮನವಿ ಸಲ್ಲಿಸಿದರು. ಮಹಾಸಭಾದ ತಾಲೂಕಾಧ್ಯಕ್ಷ ಎಸ್. ಸುರೇಶ್, ಪಪಂ ಸದಸ್ಯರಾದ ಕೆ. ಈಶಪ್ಪ, ಸಿರಿಬಿ ಮಂಜುನಾಥ, ಮುಖಂಡರಾದ ಎನ್. ಅಜೇಯ, ಹನುಮಂತಪ್ಪ, ಮಂಜು ಮಯೂರ, ಎಚ್. ವೀರಣ್ಣ ಇದ್ದರು.
Published on

ಕೂಡ್ಲಿಗಿ: ವಾಲ್ಮೀಕಿ ಜನಾಂಗದವರ ವಿರುದ್ಧ ಅಶ್ಲೀಲ ಪದ ಬಳಸಿದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲು ಮಾಡಲು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಪದಾಧಿಕಾರಿಗಳು ಗುರುವಾರ ಪಟ್ಟಣದ ಪೊಲೀಸ್ ಠಾಣೆಯ ಸಿಪಿಐ ಪ್ರಲ್ಹಾದ್ ಆರ್.ಚನ್ನಗಿರಿಗೆ ಮನವಿ ಸಲ್ಲಿಸಿದರು.

ರಮೇಶ ಕತ್ತಿ ಅವರು ವಾಲ್ಮೀಕಿ(ಬ್ಯಾಡರು) ಸಮಾಜದ ವಿರುದ್ದ ಅಶ್ಲೀಲ ಮಾತುಗಳನಾಡಿದ್ದಾರೆ. ಅದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿಯೂ ಬಿತ್ತರಗೊಂಡಿದೆ. ಇದು 50 ಲಕ್ಷಕ್ಕೂ ಹೆಚ್ಚು ಜನ ಸಂಖ್ಯೆ ಹೊಂದಿರುವ ವಾಲ್ಮೀಕಿ(ಬ್ಯಾಡರು) ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದೆ. ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆಗೆ ಭಂಗ ತಂದಿರುವ ರಮೇಶ ಕತ್ತಿ ಅವರನ್ನು ಕೂಡಲೇ ಬಂಧಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಾಸಭಾದ ತಾಲೂಕಾಧ್ಯಕ್ಷ ಎಸ್.ಸುರೇಶ್, ಪಪಂ ಸದಸ್ಯರಾದ ಕೆ. ಈಶಪ್ಪ, ಸಿರಿಬಿ ಮಂಜುನಾಥ, ಮುಖಂಡರಾದ ಎನ್.ಅಜೇಯ, ಹನುಮಂತಪ್ಪ, ಮಂಜು ಮಯೂರ, ಎಚ್.ವೀರಣ್ಣ, ಪ್ರಕಾಶ, ಎಂ.ವೆಂಕಟೇಶ, ಸೊಲ್ಲೇಶ, ಜೂಗಲ್ ಭರತ್, ಕೆ.ರಾಘವೇಂದ್ರ, ಶಾಮಿಯಾನ ಚಂದ್ರು, ಸಿ.ಬಿ. ಗುರುರಾಜ್, ಸಕ್ರೆಪ್ಪ, ದುರುಗಪ್ಪ, ಮಾರುತಿ, ಸೊಲ್ಲೇಶ, ಜಬೇರ್, ಮಂಜುನಾಥ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net