ಕಮಲಶಿಲೆ ದೇಗುಲ ಪ್ರವೇಶಗೈದ ಕುಬ್ಜೆ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ದೇವಿಗೆ ನೈಸರ್ಗಿಕ ಜಳಕ!

web - kamalashile
ಕಮಲಶಿಲೆ ಶ್ರೀಬ್ರಾಹ್ಮೀ ದುರ್ಗಾಪರಮೇಶ್ವರಿ ಅಮ್ಮನವರ ದೇವಳದ ಸಮೀಪದಲ್ಲಿ ಹರಿಯುವ ಪವಿತ್ರ ಕುಬ್ಜಾ ನದಿ ಬುಧವಾರ ದೇವಳದ ಗರ್ಭಗುಡಿ ಪ್ರವೇಶಿಸಿರುವುದು.
Published on

ಕಮಲಶಿಲೆ: ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರೀ ಅಮ್ಮನವರ ದೇವಳ ಸಮೀಪದಲ್ಲಿ ಹರಿಯುವ ಪವಿತ್ರ ಕುಬ್ಜಾ ನದಿ ಬುಧವಾರ ರಾತ್ರಿ 1.45ರ ಸುಮಾರಿಗೆ ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿ ಪಾದ ಸ್ಪರ್ಶಿಸಿದ್ದಾಳೆ.

ದೇವಿಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಕುಬ್ಜಾ ನದಿ ದೇವಳದ ಗರ್ಭಗುಡಿ ಪ್ರವೇಶಿಸಿರುವುದು ಅನಾವೃಷ್ಟಿ ದೂರವಾಗಿ ಸುಭಿಕ್ಷೆ ನೆಲೆಯಾಗಲು ಶುಭ ಸಂದೇಶ ಎನ್ನುವುದು ಪ್ರತೀತಿ. ದೇವಳದ ಗರ್ಭಗುಡಿ ಪ್ರವೇಶಿಸಿ ದೇವಿಯ ಪಾದ ಸ್ಪರ್ಶಿಸಿದ ಬಳಿಕ ಭಕ್ತರು ಶುಭ ಘಳಿಗೆಯಲ್ಲಿ ದರ್ಶನ ಪಡೆಯುತ್ತಾರೆ. ನದಿ ನೀರು ದೇವಿಯ ಉದ್ಬವಲಿಂಗ ಮುಳುಗಿಸಿದಾಗ ದೇವಿಯ ಸ್ನಾನವಾಗಿದೆ ಎನ್ನುವುದು ನಂಬಿಕೆ.

ಅದ್ಭುತ ಕ್ಷಣ ಕಣ್ತುಂಬಿಕೊಂಡ ಭಕ್ತರು

ಮಂಗಳಾರತಿ ಬೆಳಗಿದ ಬಳಿಕ ದೇವಿ ಉದ್ಬವ ಲಿಂಗದ ಬಳಿ ಇಟ್ಟಿರುವ ಹೂವು ನೀರಿನಲ್ಲಿ ತೇಲಿಕೊಂಡು ಗರ್ಭ ಗುಡಿಯಿಂದ ಹೊರ ಬಂದು ನೀರು ಇಳಿಮುಖಗೊಳ್ಳುವ ಅದ್ಭುತ ಕ್ಷಣದ ಬಳಿಕ ಭಕ್ತರು ಸ್ನಾನ ಮಾಡುತ್ತಾರೆ. ಊರ ಪರವೂರ ಸಾವಿರಾರು ಭಕ್ತರು ಈ ಕ್ಷಣ ವೀಕ್ಷಿಸಲು ಆಗಮಿಸುತ್ತಾರೆ. ದೇವಳ ಆನುವಂಶಿಕ ಮೊಕ್ತೇಸರ ಶೆಟ್ಟಿಪಾಲು ಸಚ್ಚಿದಾನಂದ ಚಾತ್ರ, ಆನುವಂಶಿಕ ಸಹ ಮೊಕ್ತೇಸರ ಆಜ್ರಿ ಚಂದ್ರಶೇಖರ ಶೆಟ್ಟಿ, ವ್ಯವಸ್ಥಾಪಕ ಗುರು ಭಟ್, ಅರ್ಚಕ ವೃಂದ, ಭಕ್ತರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net