ಸಾರಿಗೆ ಬಸ್​ ಡ್ರೈವರ್​-ಕಂಡಕ್ಟರ್​ ಮೇಲೆ ಡಿಪೋ ಮ್ಯಾನೇಜರ್​ ದಬ್ಬಾಳಿಕೆ: ವಿಡಿಯೋ ವೈರಲ್​

sanduru bus dipo
Published on

ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು ತವರಲ್ಲೇ ಬಸ್​ ಡ್ರೈವರ್​ ಮತ್ತು ಕಂಡಕ್ಟರ್​ ಮೇಲೆ ಅಧಿಕಾರಿಯ ದಬ್ಬಾಳಿಕೆ ನಡೆದಿದೆ. "ಸೂ… ಮಗನೇ.. ಎಲ್ಲಿ ಹೋಗಿದ್ಯಲೇ..? ಕೆರ (ಚಪ್ಪಲಿ) ತಗೊಂಡ್ ಹೊಡಿತೀನಿ.. ಆ ಲಾಠಿ ತಗೊಂಡ್ ಬನ್ರೋ ಇಲ್ಲಿ...'' ಎನ್ನುತ್ತಾ ಸಂಡೂರಿನ ಸಾರಿಗೆ ಡಿಪೋ ಮ್ಯಾನೇಜರ್ ವೆಂಕಟೇಶ್​ ಎಂಬಾತ ಡ್ರೈವರ್​ಗೆ ಬೈದಿರುವ ವಡಿಯೋ ವೈರಲ್​ ಆಗಿದೆ.

ಕಳೆದ ವಾರ ಸಂಡೂರಿನ ಡಿಪೋದಲ್ಲಿ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಕಲೆಕ್ಷನ್ ಟಾರ್ಗೆಟ್ ಎನ್ನುವುದು ಸಾರಿಗೆ ನಿಗಮಗಳಲ್ಲಿ ಸಾಮಾನ್ಯ ಪ್ರಕ್ರಿಯೆ. ಆದ್ರೆ ಬಸ್ ಕೊಂಡೊಯ್ಯುವ ಡ್ರೈವರ್ಸ್-ಕಂಡಕ್ಟರ್​ಗಳಿಗೆ ರೂಟ್​ಗಳ ಆಧಾರದ ಮೇಲೆ ಇಂತಿಷ್ಟು ಟಾರ್ಗೆಟ್​ ಎಂದು ಫಿಕ್ಸ್ ಮಾಡಲಾಗಿರುತ್ತೆ. ಟಾರ್ಗೆಟ್ ರೀಚ್ ಮಾಡದ ಸಿಬ್ಬಂದಿಯನ್ನು ಡಿಪೋ ಮ್ಯಾನೇಜರ್ ತರಾಟೆ ತೆಗೆದುಕೊಳ್ಳುವುದು ಕೂಡ ಸಾಮಾನ್ಯ. ಆದ್ರೆ ಇಲ್ಲಿ ಡ್ರೈವರ್-ಕಂಡಕ್ಟರ್ ಅವರೊಂದಿಗೆ ಅಮಾನವೀಯವಾಗಿ ವರ್ತಿಸಿದ್ದಷ್ಟೇ ಅಲ್ಲ, ಅವಾಚ್ಯ ಶಬ್ದದಿಂದ ಡಿಪೋ ಮ್ಯಾನೇಜರ್​ ನಿಂದಿಸಿದ್ದಾರೆ. ಅಷ್ಟು ಸಾಲದ್ದಕ್ಕೆ ಬೆತ್ತ ತೋರಿಸಿ ಡ್ರೈವರ್ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net