More

    ಇಂದಿನಿಂದ ಗುರುವಾರ ಮಧ್ಯಾಹ್ನದ ವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ಬಂದ್​

    ಮೈಸೂರು: ಇಂದಿನಿಂದ ಗುರುವಾರ ಮಧ್ಯಾಹ್ನದ ವರೆಗೆ ಚಾಮುಂಡಿ ಬೆಟ್ಟಕ್ಕೆ ಭಕ್ತರ ಪ್ರವೇಶ ನಿಷೇಧಿಸಿ ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶ ಹೊರಡಿಸಿದ್ದಾರೆ.

    ನಾಳೆ(ಅ.6) ಮಹಾಲಯ ಅಮಾವಾಸ್ಯೆ. ಈ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಬರುವ ಸಾಧ್ಯತೆ ಇದೆ. ರಾಜ್ಯ, ಹೊರ ರಾಜ್ಯದಿಂದಲೂ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲು ಭಕ್ತರು ಬರಲಿದ್ದು, ಜನಸಂದಣಿ ಹೆಚ್ಚಾಗುವ ನಿರೀಕ್ಷೆ ಇದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಇಂದು(ಅ.5) ಬೆಳಗಿನ ಜಾವ 4 ಗಂಟೆಯಿಂದ ಗುರುವಾರ(ಅ.7) ಮಧ್ಯಾಹ್ನ ದವರೆಗೂ ನಿರ್ಬಂಧ ವಿಧಿಸಲಾಗಿದೆ. ಆದರೆ, ಧಾರ್ಮಿಕ ಪೂಜಾ ವಿಧಿ-ವಿಧಾನಗಳು ಎಂದಿನಂತೆ ನಡೆಯಲಿವೆ. ಅ.7ರಂದು ಮೈಸೂರು ದಸರಾ 2021ರ ಉದ್ಘಾಟನಾ ಮಹೋತ್ಸವ ನೆರವೇರಲಿದ್ದು, ಈ ಸಮಾರಂಭಕ್ಕೆ ಆಗಮಿಸುವ ಗಣ್ಯರು ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಬಹುದು. ಅವರಿಗೆ ಈ ನಿಷೇಧ ಅನ್ವಯಿಸುವುದಿಲ್ಲ‌ ಎಂದು ಜಿಲ್ಲಾಡಳಿತ ಸೂಚಿಸಿದೆ.

    ಪಿಜಿಯಲ್ಲಿ ರೂಂ ಪಡೆಯುವ ಸೋಗಿನಲ್ಲಿ ಬಂದವ ಮಾಡಬಾರದ್ದು ಮಾಡಿ ಪರಾರಿ!

    ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts