More

    ಪಿಜಿಯಲ್ಲಿ ರೂಂ ಪಡೆಯುವ ಸೋಗಿನಲ್ಲಿ ಬಂದವ ಮಾಡಬಾರದ್ದು ಮಾಡಿ ಪರಾರಿ!

    ಬೆಂಗಳೂರು: ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ‘ಭವಿಷ್ಯ’ ಪಿಜಿಗೆ ಹೊಸದಾಗಿ ಬಂದಿರುವುದಾಗಿ ಹೇಳಿ ರೂಂನ ಕೀ ಪಡೆದವ ಒಳ ಹೋದವ ಮಾಡಬಾರದ್ದು ಮಾಡಿ ಪರಾರಿಯಾಗಿದ್ದಾನೆ.

    ಬೆಳಗಾವಿ ಮೂಲದ ಮಕರಂದ್ ಎಂಬುವವರು ಕೊಟ್ಟ ದೂರಿನ ಆಧಾರದ ಮೇರೆಗೆ ಸದ್ದುಗುಂಟೆಪಾಳ್ಯ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

    ಬಿಟಿಎಂ ಲೇಔಟ್ 1ನೇ ಹಂತದಲ್ಲಿರುವ ಭವಿಷ್ಯ ಪಿಜಿಯಲ್ಲಿ ಮಕರಂದ್ ತನ್ನ ಸ್ನೇಹಿತ ರಾಜ್‌ಶಾ ಜತೆಗೆ ವಾಸಿಸುತ್ತಿದ್ದರು. ಇವರ ಬಳಿ 66 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್‌ ಇತ್ತು. ಇವರ ಸ್ನೇಹಿತ ರಾಜ್‌ಶಾ ಬಳಿ 43 ಸಾವಿರ ರೂ. ಮೌಲ್ಯದ ಲ್ಯಾಪ್‌ಟಾಪ್ ಇತ್ತು. ಸೆ.29ರಂದು ಮಧ್ಯಾಹ್ನ 1 ಗಂಟೆಗೆ ಇವರ ರೂಂಗೆ ಬಂದ ಅಪರಿಚಿತ ‘ತಾನು ಹೊಸದಾಗಿ ಇದೇ ಪಿಜಿಗೆ ಸೇರಿದ್ದು, ಪಿಜಿ ಮಾಲೀಕರು ಈ ರೂಂನಲ್ಲಿ ಇರಲು ಹೇಳಿದ್ದಾರೆ. ರೂಂ ಕೀ ಕೊಟ್ಟರೆ ನನ್ನ ಲಗೇಜ್‌ಗಳನ್ನು ತರುತ್ತೇನೆ’ ಎಂದು ಹೇಳಿ ಮಕರಂದ್ ಅವರಿಂದ ರೂಂನ ಕೀ ಪಡೆದಿದ್ದ.

    ಮಕರಂದ್ ಹಾಗೂ ರಾಜ್‌ಶಾ ಹೊರ ಹೋಗಿ ಸ್ವಲ್ಪ ಹೊತ್ತಿನ ಬಳಿಕ ಹಿಂತಿರುಗಿದಾಗ ರೂಂನಲ್ಲಿ ಇಟ್ಟಿದ್ದ ಎರಡೂ ಲ್ಯಾಪ್‌ಟಾಪ್ (1.9 ಲಕ್ಷ ರೂ. ಮೌಲ್ಯ) ಇರಲಿಲ್ಲ. ಜತೆಗೆ ಅಪರಿಚಿತ ವ್ಯಕ್ತಿಯೂ ಇರಲಿಲ್ಲ. ಈ ಬಗ್ಗೆ ಪಿಜಿ ಮಾಲೀಕರನ್ನು ವಿಚಾರಿಸಿದಾಗ ಪಿಜಿಗೆ ಯಾರೂ ಹೊಸದಾಗಿ ಬಂದಿಲ್ಲ ಎಂದು ತಿಳಿಸಿದ್ದರು. ಆಗ ಲ್ಯಾಪ್‌ಟಾಪ್ ಕಳ್ಳನ ಕರಾಮತ್ತು ಬೆಳಕಿಗೆ ಬಂದಿತ್ತು.

    ಪಾರ್ಟಿಯಲ್ಲಿ ಆಡಿದ ಆ ಒಂದು ಮಾತು, ಸಮಂತಾರ ನಿರ್ಧಾರವೇ ಡಿವೋರ್ಸ್​ಗೆ ಕಾರಣವಾಯ್ತಾ? ಇಬ್ಬರ ಅಹಂ ಕತೆಯಿದು..?!

    ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನ: ವಿರೋಧಿಸಿದ್ದಕ್ಕೆ ಮಹಿಳೆಗೆ ಬೆಂಕಿಯಿಟ್ಟು ಕೊಂದ ಕಾಮುಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts