ಸದ್ಯದಲ್ಲೇ ಬೆಂಗಳೂರು-ಜೋಗ್​ ಫಾಲ್ಸ್​ ಪ್ಯಾಕೇಜ್ ಪ್ರವಾಸ ಆರಂಭ; ಇಲ್ಲಿದೆ ಪೂರ್ಣ ವಿವರ…

KSRTC
Published on

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಬೆಂಗಳೂರು-ಜೋಗ ಜಲಪಾತ ಪ್ಯಾಕೇಜ್​ ಪ್ರವಾಸವನ್ನು 19ರಂದು ಆರಂಭಿಸಲಿದೆ. ವಾರಾಂತ್ಯದಲ್ಲಿ (ಶುಕ್ರವಾರ-ಶನಿವಾರ) ನಾನ್​ ಎಸಿ ಸ್ಲೀಪರ್​ ಬಸ್​ನಲ್ಲಿ ಪ್ರವಾಸ ಇರಲಿದೆ. ವಯಸ್ಕರಿಗೆ 3,000 ರೂ. ಹಾಗೂ ಮಕ್ಕಳಿಗೆ 2,800 ರೂ. ದರ ನಿಗದಿಪಡಿಸಲಾಗಿದೆ.

ಬೆಂಗಳೂರು-ಸೋಮನಾಥಪುರ ಪ್ರವಾಸ ವಿವರ

ಬೆಂಗಳೂರು-ಸೋಮನಾಥಪುರ ಪ್ರವಾಸ 20ಕ್ಕೆ ಆರಂಭವಾಗಲಿದೆ. ಈ ಪ್ರವಾಸ ಕರ್ನಾಟಕ ಸಾರಿಗೆ ಬಸ್​ನಲ್ಲಿ ವಾರಾಂತ್ಯದಲ್ಲಿ ಇರಲಿದೆ. ಸೋಮನಾಥಪುರ, ತಲಕಾಡು, ಮಧ್ಯರಂಗ, ಭರಚುಕ್ಕಿ, ಗಗನಚುಕ್ಕಿ ತಾಣಗಳನ್ನು ಒಳಗೊಂಡಿದೆ. ವಯಸ್ಕರಿಗೆ 500 ರೂ. ಹಾಗೂ ಮಕ್ಕಳಿಗೆ 350 ರೂ. ದರವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net