

ಬೆಳ್ತಂಗಡಿ: ದಿಡುಪೆಯಿಂದ ಸುಮಾರು 2.5 ಕಿ.ಮೀ ದೂರದ ಮಲವಂತಿಗೆ ಗ್ರಾಮದ ಸರ್ಕಾರಿ ಕಿರಿಯ ಪ್ರಾರ್ಥಮಿಕ ಶಾಲೆ ಕಜಕ್ಕೆ, ಮಲವಂತಿಗೆ ಭಾಗಕ್ಕೆ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕ ಗ್ರಾಮಸ್ಥರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭಿಸಿದೆ.
ಮಲವಂತಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೋಹಿಣಿ ಜಯವರ್ಮ ಗೌಡ ಕಲ್ಬೆಟ್ಟು ಮಂಗಳವಾರ ಚಾಲನೆ ನೀಡಿದರು. ಶಾಸಕ ಹರೀಶ್ ಪೂಂಜ, ರಸ್ತೆ ಸಾರಿಗೆ ಸಂಪರ್ಕ ವಿಸ್ತರಣೆ ವ್ಯವಸ್ಥೆಗೆ ಕೆಎಸ್‌ಆರ್‌ಟಿಸಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಿದ್ದ ಸಂದರ್ಭ ಮಲವಂತಿಗೆ ಗ್ರಾಮದ ತೀಕ್ಷಿತ್ ಕೆ.ಕಲ್ಪೆಟ್ಟು ಬಸ್ ಸಮಸ್ಯೆ ಬಗ್ಗೆ ಗಮನ ಸೆಳೆದಿದ್ದರು.
ಕರ್ನಾಟಕ ಸಾರಿಗೆ ಸಂಸ್ಥೆ ಸಿಬ್ಬಂದಿ ನಾರಾಯಣ ಪೂಜಾರಿ ಹಾಗೂ ಚಾಲಕರು ಮತ್ತು ನಿರ್ವಾಹಕರಾದ ವಿನಯಚಂದ್ರ, ಕರುಣಾಕರ, ಮತ್ತು ದಯಾನಂದ, ಬಂಗಾಡಿ ಬ್ಯಾಂಕ್ ನಿರ್ದೇಶಕ ಕೇಶವ ಎಂ.ಕೆ, ಮಲವಂತಿಗೆ ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷ ನಾರಾಯಣ ಗೌಡ, ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಅಧ್ಯಕ್ಷ ತೀಕ್ಷಿತ್ ಕೆ.ಕಲ್ಬೆಟ್ಟು, ಶ್ರೀ ಸಾರ್ವಜನಿಕ ಗಣೇಶೋತ್ಸವ ಟ್ರಸ್ಟ್ ಅಧ್ಯಕ್ಷ ಸಂತೋಷ್ ಪೂಜಾರಿ, ಪ್ರಮುಖರಾದ ರಂಗನಾಥ, ಪರಮೇಶ್ವರ್, ಶೇಖರ ಗೌಡ ಪೊದ್ಕೆತರು, ಗ್ರಾಮಸ್ಥರಾದ ಮಧುಸೂದನ್ ಮಲ್ಲ, ಶೇಖರ ಗೌಡ ಹೊಳೆಕೆರೆ, ರಾಧಾಕೃಷ್ಣ ಗೌಡ ಮಜಲು, ರಮೇಶ್ ಗೌಡ ವಿದ್ಯಾನಗರ, ಸಚಿನ್ ಗೌಡ ಬದ್ಲಾಯಿ, ಶ್ರೀಹರಿ ಭಟ್, ಸಂಜೀವ ಗೌಡ ಪುನ್ಕೆದಡಿ, ರಮೇಶ್ ಗೌಡ, ಸಂಪತ್ ಪೂಜಾರಿ ಕಜಕ್ಕೆ, ಸಾಗರ್ ಅಡ್ಡಕೊಡಂಗೆ, ರಾಜೇಶ್ ಗೌಡ ಬರ್ಕಲಟ್ಟು ಮೊದಲಾದವರು ಉಪಸ್ಥಿರಿದ್ದರು.
ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಮುಖ್ಯಸ್ಥ ಉಮೇಶ್ ಗೌಡ ಸ್ವಾಗತಿಸಿದರು. ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ಕಾರ್ಯದರ್ಶಿ ಜಯಂತ ಹೆಗ್ಡೆ ವಂದಿಸಿದರು.